ADVERTISEMENT

ಜೆಲಿಯಾಂಗ್‌: ನಾಗಾಲ್ಯಾಂಡ್‌ ಮುಖ್ಯಮಂತ್ರಿ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ಕೊಹಿಮ: ನಾಗಾಲ್ಯಾಂಡ್‌ನ  ನೂತನ ಮುಖ್ಯಮಂತ್ರಿಯಾಗಿ ಟಿ.ಆರ್‌. ಜೆಲಿಯಾಂಗ್‌ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶುಕ್ರವಾರದ (ಜುಲೈ 22) ಒಳಗಾಗಿ ವಿಶ್ವಾಸ ಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು ಹೊಸ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ. ಆ ಮೂಲಕ, ನಾಗಾಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ನಲ್ಲಿನ (ಎನ್‌ಪಿಎಫ್‌) ನಾಯಕತ್ವ ಬಿಕ್ಕಟ್ಟು ಅಂತ್ಯ ಕಂಡಿದೆ.

ಮುಖ್ಯಮಂತ್ರಿಯಾಗಿದ್ದ ಶೂರ್‌ ಲೀಜಿಟ್ಸು ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಜೆಲಿಯಾಂಗ್‌, ತಮಗೆ 41 ಶಾಸಕರ ಬೆಂಬಲ ಇದೆ ಎಂದು ಹೇಳಿದ್ದರು.

ADVERTISEMENT

ಹಾಗಾಗಿ, ರಾಜ್ಯಪಾಲ ಆಚಾರ್ಯ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸುವಂತೆ ಲೀಝಿಟ್ಸ್‌ ಅವರಿಗೆ ಸೂಚಿಸಿದ್ದರು. ಇದಕ್ಕಾಗಿ ಬುಧವಾರ 9.30ಕ್ಕೆ ವಿಶೇಷ ಅಧಿವೇಶನ ಕರೆಯುವಂತೆ ಸಭಾಧ್ಯಕ್ಷ ಇಮ್ಟಿವಪಾಂಗ್‌ ಅವರಿಗೆ ರಾಜ್ಯಪಾಲರು ಮಂಗಳವಾರ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.