ADVERTISEMENT

ತಂದೆಯಾದ 14ರ ಬಾಲಕ!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST

ತಿರುವನಂತಪುರ: ತನಗಿಂತ ನಾಲ್ಕು ವರ್ಷ ಹಿರಿಯ ಳಾದ ಯುವತಿಯಿಂದ ಮಗು ಪಡೆಯುವ ಮೂಲಕ ಕೊಚ್ಚಿಯ 14 ವರ್ಷದ ಬಾಲಕನೊಬ್ಬ ತಂದೆಯಾಗಿದ್ದಾನೆ.

‘ಎರಡು ತಿಂಗಳು ಪ್ರಾಯದ ಹೆಣ್ಣು  ಮಗುವಿನ ತಂದೆ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ಎಂಬುದು ಪಿತೃತ್ವ ಪರೀಕ್ಷೆಯಲ್ಲಿ ಧೃಡಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿಗೆ ಜನ್ಮ ನೀಡಿರುವ 18 ವರ್ಷದ ಯುವತಿ ಬಾಲಕನ ಸೋದರ ಸಂಬಂಧಿಯಾಗಿದ್ದು, ನೆರೆಮನೆ ನಿವಾಸಿಯಾಗಿದ್ದಾಳೆ. ‘ಯುವತಿ ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ’ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನ ಹೇಳಿಕೆಯ ಆಧಾರದಲ್ಲಿ ಯುವತಿಯ ವಿರುದ್ಧವೂ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ADVERTISEMENT

‘ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದ್ದೇವೆ’ ಎಂದು  ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.