ADVERTISEMENT

ತಂದೆ ಹತ್ಯೆ– ಶಿಕ್ಷೆ ಕಡಿತಕ್ಕೆ ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಸ್ನೇಹಿತನ ಜತೆ ಮನೆಯಲ್ಲಿ ಮದ್ಯ ಸೇವಿಸಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ತಂದೆಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯವು ನೀಡಿ­ರುವ ಏಳು ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

ವಯಸ್ಸಾದ ತಂದೆಯನ್ನು ಕಾಳಜಿ­ಪೂರ್ವಕವಾಗಿ ನೋಡಿಕೊಳ್ಳಬೇಕಾದ ಮಗನೇ ಹೊಡೆದು ಗಾಯಗೊಳಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿರುವ ಅಪರಾಧಿಯ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್‌. ಪಿ. ಗರ್ಗ್ ತಿಳಿಸಿದ್ದಾರೆ.
ಹರಿತವಾದ ಆಯುಧದಿಂದ ಹಲ್ಲೆ ಮಾಡಿ ನಂತರ ಕತ್ತು ಹಿಸುಕಿ ಹತ್ಯೆ ಮಾಡಿ­ರುವ ರೋಹಿತ್‌ ಯಾವ ಕಾರ­ಣಕ್ಕೂ ಕ್ಷಮಾರ್ಹನಲ್ಲ  ಎಂದು ನ್ಯಾಯ­ಮೂರ್ತಿಗಳು ತಿಳಿಸಿದ್ದಾರೆ.

2011ರ ಫೆಬ್ರುವರಿ 14ರಂದು ರೋಹಿತ್ ತನ್ನ ಸ್ನೇಹಿತನ ಜತೆ ಮನೆ­ಯಲ್ಲಿ ಮದ್ಯ ಸೇವಿಸುತ್ತಿದ್ದಾಗ ತಂದೆ ಆಕ್ಷೇಪಿಸಿ­ದ್ದರು.
ಸ್ನೇಹಿತ ಅಲ್ಲಿಂದ ತೆರಳಿದ ನಂತರ ರೋಹಿತ್‌ ಅವರು ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಎಂದು ಆರೋಪ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.