ADVERTISEMENT

ತಂಬಾಕು ತ್ಯಜಿಸಲು ಪ್ರಜೆಗಳಿಗೆ ಮೋದಿ ಕರೆ

​ಪ್ರಜಾವಾಣಿ ವಾರ್ತೆ
Published 31 ಮೇ 2014, 10:51 IST
Last Updated 31 ಮೇ 2014, 10:51 IST

ನವದೆಹಲಿ (ಪಿಟಿಐ): ‘ತಂಬಾಕಿಗೆ ವಿದಾಯ ಹೇಳುವ ಮೂಲಕ  ಆರೋಗ್ಯಕರ ಭಾರತಕ್ಕೆ ಬುನಾದಿ ಹಾಕಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕರೆ ನೀಡಿದ್ದಾರೆ.

‘ತಂಬಾಕು ಸೇವನೆಯ ಅಪಾಯಗಳ ಬಗ್ಗೆ ಜಾಗೃತಿ ಹಾಗೂ ಭಾರತದಲ್ಲಿ ತಂಬಾಕು ಸೇವನೆ ತಗ್ಗಿಸಲು ಯತ್ನಿಸಲು ವಿಶ್ವ ತಂಬಾಕು ರಹಿತ ದಿನದಂದು ಪ್ರತಿಜ್ಞೆ ಮಾಡಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ತಂಬಾಕು ಕೇವಲ ಸೇವಿಸುವವರ ಮೇಲೆ ಮಾತ್ರವಲ್ಲ  ಸುತ್ತಲಿನ ಜನರ ಮೇಲೂ ಪರಿಣಾಮ ಬೀರುತ್ತದೆ. ತಂಬಾಕಿಗೆ ವಿದಾಯ ಹೇಳುವ ಮೂಲಕ ಆರೋಗ್ಯಕರ ಭಾರತದ ಬುನಾದಿ ಹಾಕಿ’ ಎಂದೂ ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.