ADVERTISEMENT

ತೃತೀಯ ರಂಗ ರಚನೆ ಸಾಧ್ಯವಿಲ್ಲ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2014, 19:30 IST
Last Updated 27 ಏಪ್ರಿಲ್ 2014, 19:30 IST

ನವದೆಹಲಿ (ಐಎಎನ್‌ಎಸ್‌):  ಕಾಂಗ್ರೆಸ್‌್ ಪಕ್ಷವು ತೃತೀಯ ರಂಗಕ್ಕೆ ಬೆಂಬಲ ನೀಡುವ ಸಾಧ್ಯತೆ ತೇಲಿಬಿಟ್ಟ ಬೆನ್ನ­ಲ್ಲಿಯೇ ಬಿಜೆಪಿ ಮುಖಂಡ ಅರುಣ್‌್ ಜೇಟ್ಲಿ, ತೃತೀಯ ರಂಗ ರಚನೆ­ಯಾಗುವ ಸಾಧ್ಯ­ತೆಯೇ ಇಲ್ಲ ಎಂದು ಖಡಾ­ಖಂಡಿತವಾಗಿ ನುಡಿದಿದ್ದಾರೆ.

ಅಲ್ಲದೇ ತೃತೀಯ ರಂಗ ರಚನೆಗೆ ಟೊಂಕ ಕಟ್ಟಿ ನಿಂತವರು  ‘ಅಸ್ಥಿರತೆಯ ವ್ಯಾಪಾರಿಗಳು’ ಎಂದು ಭಾನುವಾರ ಲೇವಡಿ ಮಾಡಿದ್ದಾರೆ.
‘ತಮ್ಮ ಪಕ್ಷವು ತೃತೀಯ ರಂಗ  ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌್ ಮುಖಂಡ ಸಲ್ಮಾನ್‌್ ಖುರ್ಷಿದ್‌ ಹೇಳಿದ್ದಾರೆ. ಕಾಂಗ್ರೆಸ್‌್ ಪಕ್ಷವು ಅಕ್ಷರಶಃ ಸೋಲು ಒಪ್ಪಿಕೊಂಡಿದೆ ಎನ್ನುವುದನ್ನು ಖುರ್ಷಿದ್‌್ ಹೇಳಿಕೆ ಧ್ವನಿಸುತ್ತದೆ’ ಎಂದೂ ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ಹೈದರಾಬಾದ್‌್ ವರದಿ: ಈ ನಡುವೆ, ಕೇಂದ್ರ ಸಚಿವ ಜೈರಾಮ್‌ ರಮೇಶ್‌್, ತೃತೀಯ ರಂಗಕ್ಕೆ ಕಾಂಗ್ರೆಸ್‌ ಪಕ್ಷವು ಹೊರ­ಗಿನಿಂದ ಬೆಂಬಲ ನೀಡುವುದಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಬಾಹ್ಯ ಬೆಂಬಲಕ್ಕೆ ಬದಲು, ತಮ್ಮ ಪಕ್ಷವು ಸರ್ಕಾರದ ಭಾಗವಾಗಿ­ರಬೇಕು ಎನ್ನುವುದು ಅವರ ಇಂಗಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.