ADVERTISEMENT

ತೆರಿಗೆ ದರ ಶೇ.28ರಿಂದ ಶೇ.18ಕ್ಕೆ ಇಳಿಕೆ: ಅಗ್ಗವಾಗಲಿವೆ 117 ವಸ್ತುಗಳು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 13:36 IST
Last Updated 10 ನವೆಂಬರ್ 2017, 13:36 IST
ಸುಶೀಲ್ ಮೋದಿ ( ಕೃಪೆ:ಎಎನ್‍ಐ)
ಸುಶೀಲ್ ಮೋದಿ ( ಕೃಪೆ:ಎಎನ್‍ಐ)   

ಗುವಾಹಟಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ಮಂಡಳಿಯು ಶುಕ್ರವಾರ ಸಭೆ ಸೇರಿದ್ದು, ತೆರಿಗೆ ದರವನ್ನು ಶೇ. 28ರಿಂದ ಶೇ 18ಕ್ಕೆ ಇಳಿಸಲಾಗಿದೆ.
ಗ್ರಾಹಕರು ಮತ್ತು ಸಣ್ಣ ಉದ್ದಿಮೆದಾರರಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ತೆರಿಗೆ ದರಗಳ ಮಿತಿಯನ್ನು ತಗ್ಗಿಸಲಾಗಿದೆ.

ಇನ್ನು ಮುಂದೆ 50 ವಸ್ತುಗಳಿಗೆ ಮಾತ್ರ ಹೆಚ್ಚಿನ ತೆರಿಗೆ ನೀಡಿ ದರೆ ಸಾಕು. ಇನ್ನುಳಿದ 117 ವಸ್ತುಗಳಿಗೆ ಶೇ. 18ರಷ್ಟು ಮಾತ್ರ ತೆರಿಗೆ ಇರುತ್ತದೆ.

ಸಾಮಾನ್ಯ ಜನರ ದಿನಬಳಕೆ ವಸ್ತುಗಳಾದ ಚಾಕಲೇಟ್, ಚೂಯಿಂಗ್ ಗಮ್, ಶ್ಯಾಂಪೂ, ಡಿಯೋಡ್ರೆಂಟ್, ಶೂ ಪಾಲಿಶ್, ಡಿಟರ್ಜೆಂಟ್ , ಎನರ್ಜಿ ಡ್ರಿಂಕ್ಸ್ ಮೊದಲಾದವುಗಳಿದೆ ತೆರಿಗೆ ಇಳಿಕೆ ಮಾಡಲಾಗಿದೆ.

ಸಭೆಯಲ್ಲಿ ಏನು ನಡೆಯಿತು ?
* ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ಮಂಡಳಿಯು 23ನೇ ಸಭೆ ಇದಾಗಿದ್ದು, 177 ಸರಕುಗಳ ತೆರಿಗೆ ಇಳಿಕೆ ಮಾಡಲಾಗಿದೆ.

ADVERTISEMENT

* ಐಷಾರಾಮಿ ಸರಕುಗಳಾದ ವಾಷಿಂಗ್ ಮೆಶಿನ್ ಮತ್ತು ಏರ್‍ ಕಂಡಿಷನರ್ ಮೇಲಿನ ತೆರಿಗೆ ಶೇ.28 ಆಗಿಯೇ ಉಳಿಯಲಿದೆ.

*ಪೇಂಟ್ ಮತ್ತು ಸಿಮೆಂಟ್ ಕೂಡಾ ಶೇ. 28 ತೆರಿಗೆಯ ಚೌಕಟ್ಟಿನಲ್ಲೇ ಬರಲಿದೆ.

*ಚೂಯಿಂಗ್ ಗಮ್, ಚಾಕಲೇಟ್, ಆಫ್ಟರ್ ಶೇವ್, ಡಿಯೊಡ್ರೆಂಟ್, ಡಿಟರ್ಜೆಂಟ್, ಚಂದ್ರಕಾಂತಶಿಲೆ ಇವುಗಳಿಗೆ ತೆರಿಗೆ ಇಳಿಕೆ ಮಾಡಲಾಗಿದೆ ಎಂದಿದ್ದಾರೆ ಜಿಎಸ್‌ಟಿಎನ್‌ ಸಮಿತಿ ಮುಖ್ಯಸ್ಥ ಸುಶೀಲ್‌ ಕುಮಾರ್‌ ಮೋದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.