ADVERTISEMENT

ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?

​ಪ್ರಜಾವಾಣಿ ವಾರ್ತೆ
Published 30 ಜೂನ್ 2014, 10:57 IST
Last Updated 30 ಜೂನ್ 2014, 10:57 IST

ನವದೆಹಲಿ (ಪಿಟಿಐ): ಜೀವ ವಿಮೆ, ಭವಿಷ್ಯ ನಿಧಿ, ಮ್ಯೂಚು­ವಲ್‌ ಫಂಡ್‌, ರಾಷ್ಟ್ರೀಯ ಸಾಲಪತ್ರ ಸೇರಿದಂತೆ   ವಿವಿಧ ರೀತಿಯ ಹಣಕಾಸು ಯೋ­ಜನೆಗಳಲ್ಲಿ ಸಾರ್ವಜನಿಕರು ಮಾಡಿರುವ ಹೂಡಿಕೆಗೆ ನೀಡಿರುವ ತೆರಿಗೆ ವಿನಾಯ್ತಿ ಮಿತಿಯನ್ನು ಹಣ­ಕಾಸು ಸಚಿವಾಲಯ ಪ್ರಸಕ್ತ ಬಜೆಟ್‌­ನಲ್ಲಿ 2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.

ಜನಸಾಮಾನ್ಯರ ಉಳಿತಾಯನ್ನು ಹಣದುಬ್ಬರದಿಂದ ರಕ್ಷಿಸಲು ಸಚಿವಾ­ಲಯ ಈ ಕ್ರಮ ಕೈಗೊಳ್ಳಲಿದೆ. ತೆರಿಗೆ ವಿನಾಯ್ತಿ ಬಯಸುವ ವೇತನ ವರ್ಗ­ದವರಿಗೆ ಇದರಿಂದ ಹೆಚ್ಚು ಅನುಕೂಲ­ವಾಗಲಿದೆ.

ಇದುವರೆಗೆ ಆದಾಯ ತೆರಿಗೆಯ 80 ಸಿ,  80 ಸಿಸಿ  ಮತ್ತು 80ಸಿಸಿಸಿಯಡಿ, ವಿವಿಧ ರೀತಿಯ ಹಣಕಾಸು ಹೂಡಿಕೆ ಯೋಜ­ನೆಗಳಿಗೆ  1 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾ­ಗಿತ್ತು. ಇದೀಗ ಇದನ್ನು ದ್ವಿಗುಣ­ಗೊಳಿ­ಸಲು ಸಚಿವಾ­ಲಯ ಚಿಂತಿಸುತ್ತಿದೆ.
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಜುಲೈ 10ರಂದು ಮಂಡಿಸ­ಲಿರುವ 2014–15ನೇ ಸಾಲಿನ ಬಜೆಟ್‌­ನಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

   ಕುಟುಂಬ ಸದಸ್ಯರ ಹೂಡಿಕೆ ಉತ್ತೇ­ಜಿಸಲು ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸಬೇಕು ಎಂದು ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದ್ದವು.

  ಹಣದುಬ್ಬರ ಹೆಚ್ಚಳ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2008ರಲ್ಲಿ ‘ಜಿಡಿಪಿ’ಯ ಶೇ 38ರಷ್ಟಿದ್ದ ಭಾರತೀಯ ಕುಟುಂಬ ಸದಸ್ಯರ ಉಳಿತಾಯ ಪ್ರಮಾಣ 2012–13ರಲ್ಲಿ ‘ಜಿಡಿಪಿ’­ಯ ಶೇ 30ಕ್ಕೆ ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT