ADVERTISEMENT

ದಶಕದಲ್ಲಿ ನೇಣಿಗೇರಿದ 3ನೇ ಉಗ್ರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 18:10 IST
Last Updated 30 ಜುಲೈ 2015, 18:10 IST

ನವದೆಹಲಿ(ಪಿಟಿಐ):ಯಾಕೂಬ್‌ ಮೆಮನ್‌ ದಶಕದಲ್ಲಿ ನೇಣಿಗೇರಿದ ಮೂರನೇ ಉಗ್ರ. 2008ರ ನವೆಂಬರ್‌್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ  ಅಜ್ಮಲ್‌ ಕಸಾಬ್‌ನನ್ನು 2012ರ ನವೆಂಬರ್‌್ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ನೇಣಿಗೇರಿಸಿ ಅಲ್ಲೇ ಮಣ್ಣು ಮಾಡಲಾಗಿತ್ತು.

2001ರ ಡಿಸೆಂಬರ್‌ 13ರಂದು ಸಂಸತ್‌ ಮೇಲೆ ನಡೆದ ದಾಳಿ ಪ್ರಕರಣದ ಅಪರಾಧಿ ಅಫ್ಜಲ್‌್ ಗುರುವನ್ನು 2013ರ ಫೆಬ್ರುವರಿ 9ರಂದು ತಿಹಾರ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು. 

ಮೊದಲ ನೇಣು:  ನಾಗಪುರ ಜೈಲಿನಲ್ಲಿ 31 ವರ್ಷಗಳ ಬಳಿಕ  ನೇಣುಗಂಬಕ್ಕೆ ಏರಿದ ಮೊದಲ ವ್ಯಕ್ತಿ ಯಾಕೂಬ್‌.  ಕೊಲೆ ಪ್ರಕರಣದಲ್ಲಿ ಅಮರಾವತಿಯ ವಾಂಖೆಡೆ  ಸಹೋದರರನ್ನು 1984ರಲ್ಲಿ  ಇಲ್ಲಿ ಗಲ್ಲಿಗೇರಿಸಲಾಗಿತ್ತು.

ಈ ಜೈಲಿನಲ್ಲಿ 1950ರ ಆಗಸ್ಟ್‌ 25ರಂದು ಮೊದಲ ಬಾರಿ ಅಪರಾಧಿಯೊಬ್ಬನನ್ನು ಗಲ್ಲಿಗೇರಿಸಲಾಗಿತ್ತು. ಯಾಕೂಬ್‌್ ಸೇರಿ ಈವರೆಗೆ ಇಲ್ಲಿ 23 ಮಂದಿಯನ್ನು ಗಲ್ಲಿಗೇರಿಸಲಾಗಿದೆ.

ನೇಣು ಹಗ್ಗ: ಯಾಕೂಬ್‌ನನ್ನು ಗಲ್ಲಿಗೇರಿಸಿದ ನೇಣು ಹಗ್ಗವನ್ನು ಬಿಹಾರದ ಬಕ್ಸಾರ್‌ ಜೈಲಿನಲ್ಲಿ ತಯಾರಿಸಲಾಗಿತ್ತು. ಇದನ್ನು ಮನಿಲಾ ಹಗ್ಗ ಎಂದು ಕರೆಯಲಾಗುತ್ತದೆ. ಕಸಾಬ್‌, ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದಾಗ ಬಳಿಸಿದ ನೇಣು ಹಗ್ಗ ಕೂಡ ಇಲ್ಲಿದೆಯೇ ಆಗಿತ್ತು.
ನೇಣು ಹಗ್ಗ ತಯಾರಿಕೆಗೆ ಬಕ್ಸಾರ್‌ ಜೈಲಿನಲ್ಲಿರುವ ನುರಿತ ಕೈದಿಗಳನ್ನು ಬಳಸಿಕೊಳ್ಳಲಾಗುತ್ತದೆ.  ಭಾರತದಲ್ಲಿ ನೇಣು ಹಗ್ಗ ತಯಾರಿಸುವ ಏಕೈಕ ಜೈಲು ಇದಾಗಿದೆ.‌‌

ಯಾಕೂಬ್‌ ಮೆಮನ್‌  ಅರ್ಜಿಯನ್ನು ಗುರುವಾರ ನಸುಕಿನ 3 ಗಂಟೆಯಲ್ಲಿ ವಿಚಾರಣೆ ನಡೆಸಿರುವುದು ಸುಪ್ರೀಂಕೋರ್ಟ್‌ನ ಹೆಗ್ಗಳಿಕೆ.-
ಅರುಣ್‌ ಜೇಟ್ಲಿ. ಹಣಕಾಸು ಸಚಿವ.

‘ತರಾತುರಿಯ ನಿರ್ಧಾರ ಅಲ್ಲ’
ನವದೆಹಲಿ: ಯಾಕೂಬ್‌  ಮೆನನ್‌ ಅರ್ಜಿಯನ್ನು ಏಳು ಬಾರಿ ವಿಚಾರಣೆ ನಡೆಸಿದ ಬಳಿಕವೂ  ಬುಧವಾರ ಇಡೀ ದಿನ ಮತ್ತೊಮ್ಮೆ ವಿಚಾರಣೆಗೆ ಒಳಪಡಿ ಸಲಾಯಿತು. ಆತನನ್ನು ನೇಣಿಗೇರಿಸುವುದಕ್ಕೆ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಗುರುವಾರ ಹೇಳಿದ್ದಾರೆ.

ADVERTISEMENT

ಯಾಕೂಬ್‌ ಗಲ್ಲು ಶಿಕ್ಷೆ ವಿಚಾರವಾಗಿ ಪ್ರಮುಖ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಅವರು ತರೂರ್‌ ಹಾಗೂ ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆಯನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.