ADVERTISEMENT

‘ದಾವೂದ್‌ ಭಾರತಕ್ಕೆ: ಲಾಭ ಪಡೆಯಲು ಬಿಜೆಪಿ ಯತ್ನ’

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
‘ದಾವೂದ್‌ ಭಾರತಕ್ಕೆ: ಲಾಭ ಪಡೆಯಲು ಬಿಜೆಪಿ ಯತ್ನ’
‘ದಾವೂದ್‌ ಭಾರತಕ್ಕೆ: ಲಾಭ ಪಡೆಯಲು ಬಿಜೆಪಿ ಯತ್ನ’   

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಭಾರತಕ್ಕೆ ಬರುವ ಇಚ್ಛೆ ಹೊಂದಿದ್ದಾನೆ. ಈ ಬಗ್ಗೆ ಆತ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುತ್ತಿದ್ದಾನೆ. ಆತನನ್ನು ಭಾರತಕ್ಕೆ ಕರೆತಂದ ಶ್ರೇಯವನ್ನು ಪಡೆದುಕೊಳ್ಳಲು ಬಿಜೆಪಿ ಬಯಸಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ವೇದಿಕೆಯ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದ್ದಾರೆ.

‘ದಾವೂದ್‌ ಈಗ ಅಂಗವಿಕಲನಾಗಿದ್ದಾನೆ. ಹಾಗಾಗಿ ಭಾರತಕ್ಕೆ ಬರಲು ಬಯಸಿದ್ದಾನೆ. ಆದರೆ ಇದರ ರಾಜಕೀಯ ಲಾಭ ಪಡೆದುಕೊಳ್ಳುವುದಕ್ಕಾಗಿ ಮುಂದಿನ ಲೋಕಸಭೆ ಚುನಾವಣೆಗೆ ಸ್ವಲ್ಪ ಮೊದಲು ದಾವೂದ್‌ನನ್ನು ಕೇಂದ್ರ ಸರ್ಕಾರ ಭಾರತಕ್ಕೆ ಕರೆತರಲಿದೆ. ಇದು ಜೋಕ್‌ ಅಲ್ಲ, ಮುಂದೆ ನಿಮಗೆ ಇದು ಅರ್ಥವಾಗಲಿದೆ’ ಎಂದು ಠಾಕ್ರೆ ಹೇಳಿದ್ದಾರೆ.

ಆತ ಭಾರತಕ್ಕೆ ಬಂದ ಬಳಿಕ ಅದಕ್ಕೆ ತಾನೇ ಕಾರಣ ಎಂದು ಬಿಜೆಪಿ ಬಡಾಯಿ ಕೊಚ್ಚಿಕೊಳ್ಳಲಿದೆ ಎಂದು ರಾಜ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.