ADVERTISEMENT

ದೀಪಕ್ ಮಿಶ್ರಾ ನೂತನ ಮುಖ್ಯ ನ್ಯಾಯಮೂರ್ತಿ

ಪಿಟಿಐ
Published 8 ಆಗಸ್ಟ್ 2017, 19:10 IST
Last Updated 8 ಆಗಸ್ಟ್ 2017, 19:10 IST
ದೀಪಕ್ ಮಿಶ್ರಾ ನೂತನ ಮುಖ್ಯ ನ್ಯಾಯಮೂರ್ತಿ
ದೀಪಕ್ ಮಿಶ್ರಾ ನೂತನ ಮುಖ್ಯ ನ್ಯಾಯಮೂರ್ತಿ   

ನವದೆಹಲಿ: ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಅವರನ್ನು ನೇಮಿಸಲಾಗಿದೆ.

ಕಾನೂನು ಸಚಿವಾಲಯ ಮಂಗಳವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ (63) ಅವರು ಇದೇ ತಿಂಗಳ 28ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಇದೇ 27ರಂದು ನಿವೃತ್ತರಾಗಲಿದ್ದಾರೆ. ಮಿಶ್ರಾ ಅವರ ಅವಧಿ 2018 ರ ಅಕ್ಟೋಬರ್ 18ವರೆಗೆ ಇರಲಿದೆ.

ಕಾವೇರಿ ಜಲ ವಿವಾದ, ಬಾಬ್ರಿ ಮಸೀದಿ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆಯನ್ನು ಮಿಶ್ರಾ ಅವರ ಅವಧಿಯಲ್ಲಿ ನಡೆಯಲಿವೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಿಶ್ರಾ ಅವರು 2011ರ ಅಕ್ಟೋಬರ್‌ 10ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಕೊಂಡಿದ್ದರು.

ADVERTISEMENT

ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್‌ ಮೆನನ್‌ ಮತ್ತು ಫಿಸಿಯೋಥೆರಪಿಯೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ಮಿಶ್ರಾ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.