ADVERTISEMENT

ದೂರವಾಣಿ: ವಿಚಾರಣೆಗೆ ಹಾಜರಾಗದ ಮಾರನ್‌

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST

ಚೆನ್ನೈ: ಅಕ್ರಮವಾಗಿ ದೂರವಾಣಿ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆಗೆ ಕೇಂದ್ರದ ಮಾಜಿ ದೂರ ಸಂಪರ್ಕ ಸಚಿವ ದಯಾನಿಧಿ ಮಾರನ್‌ ಹಾಗೂ ಅವರ ಸಹೋದರ ಕಲಾನಿಧಿ ಮಾರನ್‌ ಗೈರುಹಾಜರಾಗಿದ್ದಾರೆ.

ಇತರ ಆರೋಪಿಗಳಾದ  ಸನ್‌ ಟಿವಿ ವಾಹಿನಿಯ ಮುಖ್ಯ ತಾಂತ್ರಿಕ ಸಹಾಯಕ ಎಸ್‌. ಕಣ್ಣನ್‌, ದಯಾನಿಧಿ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ವಿ. ಗೌತಮನ್‌, ಕೆ.ಎಸ್‌. ರವಿ, ಬಿಎಸ್‌ಎನ್‌ಎಲ್‌ ಅಧಿಕಾರಿ ವೇಲು ಸಾಮಿ ಹಾಜರಾಗಿದ್ದರು.

ದಯಾನಿಧಿ ಮಾರನ್ ನಿವಾಸಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ಅಧಿಕ ಸಾಮರ್ಥ್ಯದ 764 ದೂರವಾಣಿ ಸಂಪರ್ಕವನ್ನು ಅಕ್ರಮವಾಗಿ  ಸನ್ ಟಿ.ವಿ ವಾಹಿನಿಯವರು ಬಳಸಿಕೊಂಡ ಆರೋಪದಲ್ಲಿ 2016ರ ಡಿಸೆಂಬರ್‌ 9ರಂದು ಸಿಬಿಐ ಇವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆಯನ್ನು ಜೂನ್‌ 6ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT