ADVERTISEMENT

ದೇಶದಲ್ಲಿ ಅಸಹಿಷ್ಣುತೆ ಇಲ್ಲ: ವೆಂಕಯ್ಯನಾಯ್ಡು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 9:04 IST
Last Updated 30 ನವೆಂಬರ್ 2015, 9:04 IST

ನವದೆಹಲಿ (ಪಿಟಿಐ): ದೇಶದಲ್ಲಿ ಸಹಿಷ್ಣುತೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು ಸೋಮವಾರು ತಿಳಿಸಿದ್ದಾರೆ.

ಲೋಕಸಭೆ ಕಲಾಪದ ಆರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಸಹಿಷ್ಣತೆ ಇಲ್ಲ, ಸಹಿಷ್ಣುತೆ ಇದೆ ಎಂದು ಪ್ರತಿಪಾದಿಸಿದರು.

ಸರ್ಕಾರ ಉಭಯ ಸದನಗಳಲ್ಲೂ ಅಸಹಿಷ್ಣುತೆ ಕುರಿತ ಚರ್ಚೆಗೆ ಸಿದ್ಧವಿದ್ದು, ವಿರೋಧಪಕ್ಷಗಳು ಶಾಂತ ರೀತಿಯಲ್ಲಿ ಚರ್ಚೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮಾತ್ರವೇ ಅಸಹಿಷ್ಣುತೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಹಿಂದೆ ಅಸಹಿಷ್ಣುತೆ ಇರಲಿಲ್ಲವೇ? ಎಂದು ವೆಂಕಯ್ಯನಾಯ್ಡು ಪ್ರಶ್ನಿಸಿದರು.

ವೆಂಕಯ್ಯನಾಯ್ಡು ಪ್ರತಿಕ್ರಿಯೆಗೆ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.