ADVERTISEMENT

ದೇಶದಾದ್ಯಂತ ನೂರು ಯೋಗ ಪಾರ್ಕ್‌ಗಳ ಘೋಷಣೆಗೆ ಸರ್ಕಾರ ಚಿಂತನೆ

ಪಿಟಿಐ
Published 25 ಮೇ 2017, 12:12 IST
Last Updated 25 ಮೇ 2017, 12:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಶ್ವ ಯೋಗ ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ಯೋಗ ಚಟುವಟಿಕೆಗಳಿಗೆಂದೇ ದೇಶದಾದ್ಯಂತ 100  ಪಾರ್ಕ್‌ಗಳನ್ನು ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ. ಸಾಂಪ್ರದಾಯಿಕ ಯೋಗಪದ್ಧತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಯೋಗಕ್ಕೆ ಸಂಬಂಧಿಸಿದ ಮತ್ತು ಇತರ ಸಂಘಟನೆಗಳು ಸ್ವಯಂಪ್ರೇರಿತವಾಗಿ ಈ ಪಾರ್ಕ್‌ಗಳನ್ನು ಮುನ್ನಡೆಸಲಿವೆ ಎಂದು ಆಯುಷ್ ಇಲಾಖೆಯ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.

ವಿಶ್ವ ಯೋಗ ದಿನದ ಅಂಗವಾಗಿ ಜೂನ್ 21ರಂದು ಲಖನೌದಲ್ಲಿ ನಡೆಯಲಿರುವ ಪ್ರಮುಖ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಸುಮಾರು 150 ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ಯಾರಿಸ್‌ನ ಐಫೆಲ್ ಟವರ್, ಲಂಡನ್‌ನ ಟ್ರಫಾಲ್ಗರ್ ಚೌಕ ಮತ್ತು ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್‌ಗಳಲ್ಲೂ ಯೋಗ ದಿನದ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ADVERTISEMENT

ಲಖನೌನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ, ಪ್ರಸಿದ್ಧ ಯೋಗಗುರುಗಳು ಸೇರಿ 51,000 ಜನ ಭಾಗವಹಿಸುವ ನಿರೀಕ್ಷೆ ಇದೆ. ದೆಹಲಿಯಲ್ಲಿಯೂ ಏಳು ಕಡೆ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

‘ಯೋಗ ಕ್ಷೇತ್ರದಲ್ಲಿ ಭಾರತದ ಪಾರಮ್ಯವನ್ನು ಜಗತ್ತು ಒಪ್ಪಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಕಳೆದ ಎರಡು ವರ್ಷಗಳಲ್ಲಿ 190ಕ್ಕೂ ಹೆಚ್ಚು ರಾಷ್ಟ್ರಗಳು ಯೋಗ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿವೆ’ ಎಂದು ಶ್ರೀಪಾದ್ ನಾಯಕ್ ಹೇಳಿದ್ದಾರೆ.

[Related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.