ADVERTISEMENT

ದೇಶದ 91 ಜಲಾಶಯಗಳ ನೀರಿನ ಸಂಗ್ರಹ ಮಟ್ಟ ಕುಸಿತ

ಏಜೆನ್ಸೀಸ್
Published 2 ಡಿಸೆಂಬರ್ 2017, 11:55 IST
Last Updated 2 ಡಿಸೆಂಬರ್ 2017, 11:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಇರುವ 91 ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ ಮಟ್ಟವು ಕೇವಲ ಒಂದು ವಾರದ ಅಂತರದಲ್ಲಿ ಶೇ.64 ರಿಂದ ಶೇ.62ಕ್ಕೆ ಕುಸಿದಿದೆ ಎಂದು  ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣ ನವೆಂಬರ್‌ 23ರ ವರೆಗೆ 101.77 ಬಿಲಿಯನ್ ಕ್ಯುಬಿಕ್‌ ಮೀಟರ್(ಬಿಸಿಎಂ) ನಷ್ಟಿತ್ತು. ಆದರೆ, ನವೆಂಬರ್ 30ರ ವೇಳೆಗೆ 98.578 ಬಿಸಿಎಂಗೆ ಇಳಿದಿದೆ.

ಜಲಾಶಯಗಳಲ್ಲಿನ ನೀರಿನ ಮಟ್ಟ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 96 ರಷ್ಟು ಇತ್ತು. ಜತೆಗೆ, ಕಳೆದ ಹತ್ತು ವರ್ಷಗಳಲ್ಲಿ ನೀರಿನ ಸಂಗ್ರಹ ಮಟ್ಟ ಸರಾಸರಿ ಶೇ.95 ರಷ್ಟಿತ್ತು ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಒಡಿಶಾ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಜಲಾಶಯಗಳು ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹ ಮಟ್ಟವನ್ನು ತಲುಪಿವೆ. ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರಾ, ಮಹಾರಾಷ್ಟ್ರ, ಉತ್ತರಾಖಂಡ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರಮುಖ ಅಣೆಕಟ್ಟುಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಸಂಗ್ರಹ ಮಟ್ಟವನ್ನು ತಲುಪಿವೆ.

91 ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯ 253.388 ಬಿಸಿಎಂ ಆಗಿದ್ದು, ಸದ್ಯ 157.799 ಬಿಸಿಎಂ ನಷ್ಟು ಸಂಗ್ರಹವನ್ನು ಹೊಂದಿವೆ. ಇದು ಒಟ್ಟು ಸಂಗ್ರಹದ ಶೇ.62 ರಷ್ಟಾಗಿದೆ.

ಇದರಲ್ಲಿ 37 ಜಲಾಶಯಗಳು 60 ಮೆಗಾವ್ಯಾಟ್‌ ಸಾಮರ್ಥ್ಯದ ಜಲ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.