ADVERTISEMENT

ದೇಶೀ ನಿರ್ಮಿತ ಧನುಷ್ ಫಿರಂಗಿಯಲ್ಲಿ ಬಳಸಿದ್ದು ಚೀನಾ ನಿರ್ಮಿತ ಕಳಪೆ ಬಿಡಿಭಾಗ!

ಪಿಟಿಐ
Published 22 ಜುಲೈ 2017, 7:53 IST
Last Updated 22 ಜುಲೈ 2017, 7:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಿರುವ 'ಧನುಷ್ ಫಿರಂಗಿ'ಯ ಬಿಡಿಭಾಗಗಳಲ್ಲಿ ಮೇಡ್ ಇನ್ ಜರ್ಮನಿ ಎಂದು ಬರೆದಿದ್ದರೂ, ಅವುಗಳನ್ನು ಚೀನಾ ನಿರ್ಮಿತ, ಕಳಪೆ ಮಟ್ಟದ ಬಿಡಿಭಾಗಗಳಾಗಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಿದೆ.

ಭಾರತೀಯ ಸೇನೆ ಬಳಸುತ್ತಿರುವ ಧನುಷ್ ಫಿರಂಗಿ ಬಿಡಿಭಾಗಗಳನ್ನು ಸಿದ್ ಸೇಲ್ಸ್ ಸಿಂಡಿಕೇಟ್ ಮತ್ತು ಜಬಲ್ಪುರದ ಗನ್ ಕ್ಯಾರಿಯೇಜ್ ಫ್ಯಾಕ್ಟರಿ (ಜಿಸಿಎಫ್) ಪೂರೈಕೆ ಮಾಡುತ್ತಿತ್ತು. ಈ ಕಂಪನಿಗಳು ಚೀನಾ ನಿರ್ಮಿತ ಕಳಪೆ ಮತ್ತು ನಕಲಿ ಬಿಡಿಭಾಗಗಳ ಮೇಲೆ 'ಮೇಡ್ ಇನ್ ಜರ್ಮನಿ' ಎಂದು ಲೇಬಲ್ ಅಂಟಿಸಿ ಮೋಸ ಮಾಡಿವೆ ಎಂದು ಸಿಬಿಐ ಎಫ್ಐಆರ್‍‍ನಲ್ಲಿ ಹೇಳಿದೆ.

ಸಿಧ್ ಕಂಪನಿಯ ಅಧಿಕಾರಿಗಳು ಜಿಸಿಎಫ್ ಅಧಿಕಾರಿಗಳೊಂದಿಗೆ ಸೇರಿ ಧನುಷ್ ಫಿರಂಗಿಗಳ ಉತ್ಪಾದನೆಗೆ ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಂಡಿದ್ದಾರೆ. ಸಿದ್ ಸೇಲ್ಸ್ ಸಿಂಡಿಕೇಟ್  ಚೀನಾ ನಿರ್ಮಿತ 'ವೈರ್ ರೇಸ್ ರೋಲರ್ ಬೇರಿಂಗ್‍'ಗಳ ಮೆಲೆ 'ಸಿಆರ್‍‍ಬಿ - ಮೇಡ್ ಇನ್ ಜರ್ಮನಿ' ಎಂಬದು ಮೊಹರು ಹಾಕಿ ಧನುಷ್ ಫಿರಂಗಿ ನಿರ್ಮಾಣಕ್ಕೆ ನೀಡಿತ್ತು ಎಂದು ಎಫ್‍ಐಆರ್‍‍ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

1999ರ ಕಾರ್ಗಿಲ್ ಯುದ್ಧದಲ್ಲಿ ಬೋಫೋರ್ಸ್ ಫಿರಂಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಬೋಫೋರ್ಸ್ ಫಿರಂಗಿಯ ದೇಶೀ ಆವೃತ್ತಿಯಾಗಿದೆ ಧನುಷ್ ಫಿರಂಗಿ.
ಅಪರಾಧಕ್ಕೆ ಸಂಚು, ವಂಚನೆ, ನಕಲಿ ಬಿಡಿಭಾಗ ಬಳಕೆ ಮೊದಲಾದ ಆರೋಪದಡಿಯಲ್ಲಿ ಸಿಬಿಐ ಈ ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.