ADVERTISEMENT

ನಾಮಫಲಕ ತುಳಿದ ಕಾಂಗ್ರೆಸ್‌ ಮುಖಂಡ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ (ಐಎಎನ್‌ಎಸ್‌): ರೈಲ್ವೆ ಪ್ರಯಾಣ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರ ನಿವಾಸದ ಎದುರು ಮಂಗಳವಾರ  ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಮುಖಂಡ ಮುಕೇಶ್‌ ಶರ್ಮಾ ಅವರು ಸದಾನಂದ ಗೌಡ ಅವರ ನಾಮಫಲಕವನ್ನು ಕಿತ್ತು ತುಳಿದು ಪ್ರತಿಭಟಿಸಿದರು.

ನವದೆಹಲಿಯ ತುಘಲಕ್‌ ರಸ್ತೆಯಲ್ಲಿರುವ ಸದಾನಂದ ಗೌಡ ಅವರ ನಿವಾಸದ ಎದುರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಜಮಾಯಿಸಿದ ಪ್ರತಿಭಟನಾಕಾರರು ಮನೆಯಿಂದ ಹೊರಬಂದ ಸಚಿವರ ಕಾರನ್ನು ಅಡ್ಡಗಟ್ಟಿದರು.
‘ಮಹಿಳಾ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಸಾಕಷ್ಟು ಪ್ರಮಾಣದ ಪೊಲೀಸ್‌ ಪಡೆಯನ್ನು ಸಚಿವರ ಮನೆಯ ಹೊರಭಾಗದಲ್ಲಿ ನಿಯೋಜಿಸಲಾಗಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗದಂತೆ ತಡೆಯಲು ಪ್ರಯತ್ನಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮುಖೇಶ್‌ ಶರ್ಮಾ ಹಾಗೂ ದೆಹಲಿ ಕಾಂಗ್ರೆಸ್‌ ಮುಖಂಡ ಅರವಿಂದರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ಸದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.