ADVERTISEMENT

ನಿಜವಾಯ್ತು, `ಈ ಬಾರಿ, ಮೋದಿ ಸರ್ಕಾರ'

​ಪ್ರಜಾವಾಣಿ ವಾರ್ತೆ
Published 16 ಮೇ 2014, 12:27 IST
Last Updated 16 ಮೇ 2014, 12:27 IST

ನವದೆಹಲಿ: ಬೆಳಿಗ್ಗೆಯಿಂದ ದೇಶದಾದ್ಯಂತ ಬಿರುಸಿನಿಂದ ಸಾಗಿರುವ ಮತ ಎಣಿಕೆಯಲ್ಲಿ ಮೋದಿ ಅಲೆಯು ಸುನಾಮಿಯಾಗಿ ಮುನ್ನುಗ್ಗುತ್ತಿರುವ ಚಿತ್ರಣ ಕಾಣುತ್ತಿದ್ದು, ಬಿಜೆಪಿ ಚುನಾವಣಾ ಘೋಷವಾಕ್ಯ `ಅಬ್ ಕಿ ಬಾರ್, ಮೋದಿ ಸರ್ಕಾರ್' (ಈ ಬಾರಿ ಮೋದಿ ಸರ್ಕಾರ) ನನಸಾಗುವುದು ಬಹುತೇಕ ಖಚಿತವಾಗಿದೆ.

ಚುನಾವಣಾ ಪ್ರಚಾರಕ್ಕಾಗಿ ಹೋದೆಡೆಯೆಲ್ಲಾ `ಭಾರತ  ಗೆಲ್ಲಿಸಿ' ಎಂದು ಭಾಷಣ ಮಾಡುತ್ತಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬಿಜೆಪಿ ಈ ನಾಗಾಲೋಟ ಕುರಿತು `ಭಾರತ ಗೆದ್ದಿತು! ಭಾರತದ ಗೆಲುವು! ಮುಂದೆ ಒಳ್ಳೆಯ ದಿನಗಳು ಬರಲಿವೆ' ಎಂದು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಮೋದಿ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಖ್ಯಾತ ಚಿತ್ರನಟ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ನರೇಂದ್ರ ಮೋದಿ ಅವರದು `ಐತಿಹಾಸಿಕ ಗೆಲುವು' ಎಂದು ಬಣ್ಣಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.