ADVERTISEMENT

ನಿತಿಶ್‌ ಕಠಾರ ಹಂತಕರಿಗೆ ಇಲ್ಲ ಗಲ್ಲು: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 11:03 IST
Last Updated 9 ಅಕ್ಟೋಬರ್ 2015, 11:03 IST

ನವದೆಹಲಿ (ಪಿಟಿಐ):  ನಿತಿಶ್‌  ಕಠಾರ ಕೊಲೆ ಪ್ರಕರಣದ ಅಪರಾಧಿಗಳಿಗೆ ನೀಡಿರುವ ಜೀವಾವಧಿ ಶಿಕ್ಷೆಯನ್ನು  ಗಲ್ಲು ಶಿಕ್ಷೆಗೆ ಹೆಚ್ಚಿಸಬೇಕು ಎಂದು ನೀಲಂ ಕಠಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಗದೀಶ್‌ ಸಿಂಗ್‌ ಖೇಹರ್‌ ಮತ್ತು ಭಾನುಮತಿ ಅವರಿದ್ದ ನ್ಯಾಯಪೀಠ ನಿತಿಶ್‌ ಕಠಾರ ಅವರನ್ನು ಹತ್ಯೆ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಬೇಡ, ಇದು ಮರ್ಯಾದೆಗೇಡಿ ಹತ್ಯೆಯಲ್ಲ ಎಂದು ಅಭಿಪ್ರಾಯಪಟ್ಟಿತು.

ನಿತಿಶ್‌ ಕಠಾರ ಅವರ  ತಾಯಿ ನೀಲಂ ಕಠಾರ ಅವರು ಅಪರಾಧಿಗಳಾದ  ವಿಶಾಲ್‌ ಮತ್ತು ವಿಕಾಸ್‌ ಯಾದವ್‌ ಸಹೋದರರಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಗೆ ಹೆಚ್ಚಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

2002ರಲ್ಲಿ ವಿಶಾಲ್‌ ಮತ್ತು ವಿಕಾಸ್‌ ಯಾದವ್‌ ಅವರು ನಿತಿಶ್‌ ಕಠಾರನನ್ನು ಅಪಹರಿಸಿ  ಹತ್ಯೆ ಮಾಡಿದ್ದರು. ಇವರಿಗೆ ಸ್ಥಳೀಯ ನ್ಯಾಯಾಲಯ ಜೀವವಾಧಿ ಶಿಕ್ಷೆ  ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.