ADVERTISEMENT

ನಿರ್ಧಾರ ಹಿಂಪಡೆದ ದೆಹಲಿ ವಿಶ್ವವಿದ್ಯಾನಿಲಯ

ಪದವಿ ಕೋರ್ಸ್‌ ವಿವಾದ

​ಪ್ರಜಾವಾಣಿ ವಾರ್ತೆ
Published 26 ಜೂನ್ 2014, 11:03 IST
Last Updated 26 ಜೂನ್ 2014, 11:03 IST

ನವದೆಹಲಿ (ಐಎಎನ್‌ಎಸ್‌): ದೆಹಲಿ ವಿಶ್ವವಿದ್ಯಾನಿಲಯವು ಪದವಿ ಕೋರ್ಸ್‌ನ ಅವಧಿಯನ್ನು ಈ ಮೊದಲು ಇದ್ದಂತೆ ಮುಂದುವರೆಸುವುದಾಗಿ ಗುರುವಾರ ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ತಿಳಿಸಿದೆ.

ದೆಹಲಿ ವಿಶ್ವವಿದ್ಯಾನಿಲಯವು ಪದವಿ ಕೋರ್ಸ್‌ನ್ನು ನಾಲ್ಕು ವರ್ಷದ ಅವಧಿಗೆ ವಿಸ್ತರಣೆ ಮಾಡಿದ ಕಾರಣ ಈ ವಿವಾದ ಉಂಟಾಗಿತ್ತು.

‘ಇಂದು ನಾವು ಈ  ನಿರ್ಧಾರದ ಬಗ್ಗೆ ಯುಜಿಸಿಗೆ ಪ್ರಸ್ತಾವನೆ ಕಳುಹಿಸಿದ್ದು, ಅದರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ’ ಎಂದು ವಿಶ್ವವಿದ್ಯಾನಿಲಯದ ಮಾಧ್ಯಮ ಸಂಯೋಜಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.