ADVERTISEMENT

ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪನ

ರಕ್ಷಣಾ ಕಾರ್ಯಕ್ಕೆ ಭಾರತದ ನೆರವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 10:05 IST
Last Updated 26 ಏಪ್ರಿಲ್ 2015, 10:05 IST

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಭಾನುವಾರ ಮತ್ತೆ 6.7 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ಕೇಂದ್ರ ಬಿಂದುವು  ಭೂ ಮಟ್ಟದಿಂದ 10ಕಿ.ಮೀ. ಆಳದಲ್ಲಿ ಇತ್ತು ಎಂದು ಅಮೆರಿಕಾ ಭೂ ವಿಜ್ಞಾನ ಸರ್ವೇಕ್ಷಣೆ ತಿಳಿಸಿದೆ. ನೇಪಾಳ ಸರ್ಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

17 ಕಿ.ಮೀ. ದಕ್ಷಿಣದಲ್ಲಿರುವ ಕೊಡಾರಿ, ಟಿಬೆಟನ್‌ಗೆ ಹತ್ತಿರವಿರುವ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದಾಗ ಜನರು ಭಯಬೀತರಾಗಿ ಓಡಿ ಹೊರಬಂದರು.

ಭಾರತದ ರಕ್ಷಣಾ ಕಾರ್ಯ: ನೇಪಾಳದಲ್ಲಿ ಭೂಕಂಪನದ ರಕ್ಷಣಾ ಕಾರ್ಯಕ್ಕೆ ಭಾರತದಿಂದ ನೆರವು ಒದಗಿಸಲಾಗಿದ್ದು. ಈ  ಕಾರ್ಯಕ್ಕೆ ‘ಆಪರೇಷನ್ ಮೈತ್ರಿ’ ಎಂದು ಹೆಸರಿಡಲಾಗಿದೆ.

ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪವಾದ ಕಾರಣ  ರಕ್ಷಣಾ, ಪರಿಹಾರ ಸಾಮಗ್ರಿಗಳನ್ನು ಹೊತ್ತ ಇಂಡಿಗೊ, ಸ್ಪೈಸ್‌ ಜೆಟ್ ವಿಮಾನಗಳಿಗೆ ಇಳಿಯಲು ಅನುಮತಿ ಸಿಗದ ಕಾರಣ ಭಾರತಕ್ಕೆ ವಾಪಸು ಮರಳಿವೆ.
ಶನಿವಾರ ಮುಂಜಾನೆ ಸಂಭವಿಸಿದ 7.9 ತೀವ್ರತೆಯ ಪ್ರಬಲ ಭೂಕಂಪನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ.

ಭಾರತದಲ್ಲೂ ಮತ್ತೆ ಭೂಕಂಪನ : ಉತ್ತರ, ಪೂರ್ವ ಭಾರತದಲ್ಲಿ ಭಾನುವಾರ  ಮತ್ತೆ ಭೂಕಂಪನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.