ADVERTISEMENT

ಪಕ್ಷಿ ಡಿಕ್ಕಿ: ನಿಲ್ದಾಣಕ್ಕೆ ಹಿಂತಿರುಗಿದ ಇಂಡಿಗೊ ವಿಮಾನ

ಪಿಟಿಐ
Published 21 ಸೆಪ್ಟೆಂಬರ್ 2017, 19:37 IST
Last Updated 21 ಸೆಪ್ಟೆಂಬರ್ 2017, 19:37 IST
ಕೋಲ್ಕತಕ್ಕೆ ಬಂದಿಳಿದ ಇಂಡಿಗೋ ವಿಮಾನ
ಕೋಲ್ಕತಕ್ಕೆ ಬಂದಿಳಿದ ಇಂಡಿಗೋ ವಿಮಾನ   

ಕೋಲ್ಕತ್ತ:  ಇಲ್ಲಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದಿರುವ ಅನುಮಾನದ ಮೇಲೆ ಒಂದು ಗಂಟೆ ಹಾರಾಟದ ಬಳಿಕ ಇಲ್ಲಿನ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ.

’ಹಾರಾಟ ಆರಂಭಿಸಿದ ವೇಳೆಯಲ್ಲೇ ಪಕ್ಷಿ ಹೊಡೆದಿದೆ ಎಂದು ಪೈಲಟ್‌ ಅನುಮಾನ ವ್ಯಕ್ತಪಡಿಸಿದರು. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ವಿಮಾನ ವಾಪಸ್ ನಿಲ್ದಾಣಕ್ಕೆ ಹಿಂತಿರುಗಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಅತುಲ್‌ ದೀಕ್ಷಿತ್‌ ತಿಳಿಸಿದ್ದಾರೆ.

’ಗುರುವಾರ ಬೆಳಿಗ್ಗೆ 10.58ಕ್ಕೆ ವಿಮಾನ ಹಾರಾಟ ಆರಂಭಿಸಿತ್ತು. 10.59ಕ್ಕೆ ಪಕ್ಷಿ ಡಿಕ್ಕಿ ಹೊಡೆದಿರಬಹುದು ಎಂದು ಪೈಲಟ್‌ ವರದಿ ನೀಡಿದ್ದಾರೆ. ವಿಮಾನಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ. ವಿಮಾನವು ನೇತಾಜಿ ಸುಭಾಷ್‍ಚಂದ್ರ ಬೋಸ್ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬೆಳಿಗ್ಗೆ 11.59ಕ್ಕೆ ಹಿಂತಿರುಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ರನ್‌ವೇ ಪರಿಶೀಲಿಸಲಾಗಿದ್ದು, ಸಣ್ಣ ಪಕ್ಷಿಯೊಂದು ಪತ್ತೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.