ADVERTISEMENT

ಪಠಾಣ್‌ ಕೋಟ್‌ ಈಗಲೂ ಅಸುರಕ್ಷಿತ: ಸಂಸದೀಯ ಸಮಿತಿ

​ಪ್ರಜಾವಾಣಿ ವಾರ್ತೆ
Published 3 ಮೇ 2016, 13:50 IST
Last Updated 3 ಮೇ 2016, 13:50 IST
ಪಠಾಣ್‌ ಕೋಟ್‌ ಈಗಲೂ ಅಸುರಕ್ಷಿತ:  ಸಂಸದೀಯ ಸಮಿತಿ
ಪಠಾಣ್‌ ಕೋಟ್‌ ಈಗಲೂ ಅಸುರಕ್ಷಿತ: ಸಂಸದೀಯ ಸಮಿತಿ   

ನವದೆಹಲಿ (ಪಿಟಿಐ): ಪಂಜಾಬ್  ರಾಜ್ಯದ ಗಡಿಯಲ್ಲಿರುವ  ಪಠಾಣ್ ಕೋಟ್ ವಾಯುನೆಲೆ ಸುರಕ್ಷಿತವಾಗಿಲ್ಲ  ಎಂದು ಭಯೋತ್ಪಾದನಾ ದಾಳಿ ಕುರಿತು ತನಿಖೆ ನಡೆಸಿದ ಸಂಸದೀಯ ಸಮಿತಿ ಮಂಗಳವಾರ ಅಭಿಪ್ರಾಯ  ವ್ಯಕ್ತಪಡಿಸಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದನಾ ದಾಳಿ ಕುರಿತು ತನಿಖೆ ನಡೆಸಿದ ಸಂಸದೀಯ ಸಮಿತಿಯ ಮುಖ್ಯಸ್ಥ ಪಿ.ಭಟ್ಟಾಚಾರ್ಯ ವಾಯುನೆಲೆ ಸಂಪೂಣರ್ವಾಗಿ ಅಸುರಕ್ಷಿತ ಎಂದಿದ್ದಾರೆ.

ಕಾಂಗ್ರೆಸ್ ಸಂಸದರಾಗಿರುವ  ಭಟ್ಟಾಚಾರ್ಯ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಈ ತನಿಖೆ ನಡೆಸಿತ್ತು.   ಈಗಲೂ ಪಠಾಣ್ ಕೋಟ್ ವಾಯುನೆಲೆ ಅತ್ಯಂತ ಅಭದ್ರವಾಗಿದ್ದು, ಉಗ್ರರು ಸುಲಭವಾಗಿ ವಾಯುನೆಲೆ ಪ್ರವೇಶ ಮಾಡಬಹುದಾಗಿದೆ ಎಂದು ಸಮಿತಿ ತಿಳಿಸಿದೆ.

ವಾಯುನೆಲೆ ಸುತ್ತಲಿನ ಗೋಡೆಯು  ತುಂಬಾ ಕಳಪೆಯಾಗಿದೆ. ಸೂಕ್ತ ಕಾವಲು  ಪಡೆ ಸಿಬ್ಬಂದಿಗಳು ಇಲ್ಲ ಎಂದು ಸಮಿತಿ ತಿಳಿಸಿದೆ. ಈ  ಎಲ್ಲ  ನ್ಯೂನತೆಗಳನ್ನು ಸರಿಪಡಿಸಿ ಭದ್ರತಾ ಕ್ರಮ ಕೈಗೊಳ್ಳುವಂತೆ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

31 ಜನ ವಿವಿಧ ಪಕ್ಷಗಳ ಸಂಸದರು ಈ ತನಿಖಾ ಸಮಿತಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.