ADVERTISEMENT

ಪತಿಯಿಂದ ಕ್ರೌರ್ಯ: ಮಹಿಳೆಗೆ ವಿಚ್ಛೇದನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 19:30 IST
Last Updated 25 ಏಪ್ರಿಲ್ 2014, 19:30 IST

ಠಾಣೆ (ಪಿಟಿಐ): ಉನ್ನತ ವ್ಯಾಸಂಗ ಮಾಡಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಕೆಲವು ಪುರುಷರು ಕೂಡ ಪತ್ನಿ ಪೀಡಕರು ಎನ್ನುವುದಕ್ಕೆ ಇಲ್ಲಿನ ಸ್ಥಳೀಯ ಕೋರ್ಟ್‌ನಲ್ಲಿ ಇತ್ಯರ್ಥಗೊಂಡ ವಿಚ್ಛೇದನ ಪ್ರಕರಣವೇ ಸಾಕ್ಷಿ.

  ಘಟನೆ ವಿವರ: ಠಾಣೆ ವಾಸಿ ಮೀರಾ ಭಾಯಿಂದರ್‌ ಅವರು ಜಲ್ಲಿ ಎಬ್ನೆಜರ್‌ ಅವರನ್ನು 2007ರ ಜುಲೈನಲ್ಲಿ ಹೈದರಾಬಾದ್‌ನಲ್ಲಿ ಕ್ರೈಸ್ತ ಸಂಪ್ರದಾಯದ ಪ್ರಕಾರ ಮದುವೆಯಾದರು. ಸ್ವಲ್ಪ ದಿನಗಳ ಬಳಿಕ ಜಲ್ಲಿ ಲಾಸ್‌್ ಏಂಜಲೀಸ್‌ಗೆ ತೆರಳಿದರು. ಅದೇ ವೇಳೆಗೆ ಸೊಸೆ ಜತೆ ಉಳಿದುಕೊಳ್ಳಲು ಬಂದ ಜಲ್ಲಿ ತಾಯಿ ಸೊಸೆಗೆ ಕಿರುಕುಳ ನೀಡಲು ಶುರುಮಾಡಿದರು.  

ಅದೇ ವರ್ಷ ನವೆಂಬರ್‌ನಲ್ಲಿ ಜಲ್ಲಿ,  ಲಾಸ್‌ ಏಂಜಲೀಸ್‌ಗೆ ಪತ್ನಿಯನ್ನು ಕರೆಸಿಕೊಂಡರು. ಅಲ್ಲಿ ಮೀರಾಗೆ ಆಘಾತ ಕಾದಿತ್ತು. ಜಲ್ಲಿಯ ಸಹೋದ್ಯೋಗಿ ಸ್ಮೃತಿ ಮುಲ್ಕಿ ಎಂಬ ಮಹಿಳೆ ಈ ದಂಪತಿ ಜತೆಯಲ್ಲಿಯೇ ವಾಸಿಸುತ್ತಿದ್ದರು. ಇಬ್ಬರೂ ಸೇರಿಕೊಂಡು ಮೀರಾಗೆ ಚಿತ್ರಹಿಂಸೆ ಕೊಡುತ್ತಿದ್ದರು. ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದರು. ಪತಿ ನೀಡುತ್ತಿದ್ದ ಮಾನಸಿಕ ಹಿಂಸೆಗೆ ರೋಸಿ ಮೀರಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಗಂಡನ ಮನೆಯವರು ಮೀರಾ ಅವರನ್ನು ಕ್ರೂರವಾಗಿ ನಡೆಸಿಕೊಂಡಿರುವ ಅಂಶವನ್ನು ಆಧಾರ ವಾಗಿಟ್ಟುಕೊಂಡು ಸ್ಥಳೀಯ ಕೋರ್ಟ್‌್ ಈ ದಂಪತಿ ವಿಚ್ಛೇದನಕ್ಕೆ ಅವಕಾಶ ಮಾಡಿಕೊಟ್ಟಿದೆ.

ಮಹಿಳೆಯ ಬಟ್ಟೆ ಹರಿದ ದುಷ್ಕರ್ಮಿಗಳು
ಗಾಜಿಯಾಬಾದ್‌ (ಪಿಟಿಐ):
ಮೂವರು ಯುವಕರು   ಮಹಿಳೆ­ಯೊಬ್ಬರನ್ನು ಚುಡಾಯಿ­ಸಿದ್ದಲ್ಲದೇ, ಆಕೆಯ ಬಟ್ಟೆ ಹರಿದು ದೌರ್ಜನ್ಯ  ಎಸಗಿ­ರುವ ಘಟನೆ ಕವಿನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.