ADVERTISEMENT

ಪನಗರಿಯಾಗೆ ಸಂಪುಟ ದರ್ಜೆ ಸ್ಥಾನಮಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 7:48 IST
Last Updated 4 ಜುಲೈ 2015, 7:48 IST

ನವದೆಹಲಿ (ಪಿಟಿಐ): ‘ನೀತಿ’ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘ಪನಗರಿಯಾ ಅವರಿಗೆ ಸಂಪುಟದ ದರ್ಜೆಯ ಸ್ಥಾನಮಾನ ಹಾಗೂ ಆಯೋಗ ಇತರ ಇಬ್ಬರು ಸದಸ್ಯರಿಗೆ ರಾಜ್ಯ ಖಾತೆ ಸಚಿವರ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಅಲ್ಲದೇ, ಪನಗರಿಯಾ ಅವರಿಗೆ ಸಚಿವ ಸಂಪುಟ ಸಭೆಗಳಿಗೂ ಆಹ್ವಾನ ದೊರೆಯಲಿದ್ದು, ಈ ಸಂಬಂಧ ಪ್ರತ್ಯೇಕ ಆದೇಶವೊಂದು ಹೊರಡಲಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಶಿಷ್ಟಾಚಾರದ ಪ್ರಕಾರ ನೀತಿ ಆಯೋಗದ ಉಪಾಧ್ಯಕ್ಷರ ಸ್ಥಾನಮಾನ ಸಚಿವ ಸಂಪುಟ ದರ್ಜೆಯದ್ದು. ಆದರೆ, ಅವರಿಗೆ ವೇತನ ಹಾಗೂ ಭತ್ಯೆಗಳು ಮಾತ್ರ ಸಂಪುಟ ಕಾರ್ಯದರ್ಶಿಯ ಮಟ್ಟದ್ದಾಗಿರುತ್ತವೆ.

ನೀತಿ ಆಯೋಗದ ಇತರ ಇಬ್ಬರು ಸದಸ್ಯರಾದ ಬಿಬೇಕ್ ಡೆಬ್ರೊರಾಯ್ ಹಾಗೂ ವಿ.ಕೆ.ಸಾರಸ್ವತ್ ಅವರ ಸ್ಥಾನಮಾನವು ರಾಜ್ಯ ಖಾತೆ ಸಚಿವರ ದರ್ಜೆಯದ್ದು. ಅವರು ಕೇಂದ್ರ ಸರ್ಕಾರದ ಕಾರ್ಯದರ್ಶಿಯ ಹುದ್ದೆಗೆ ದೊರೆಯವಷ್ಟು ವೇತನವನ್ನು ಪಡೆಯುತ್ತಾರೆ.

ಈ ಹಿಂದಿನ ಯೋಜನಾ ಆಯೋಗವನ್ನು ಬರ್ಖಾಸ್ತುಗೊಳಿಸಿ ಹೊಸದಾಗಿ ನೀತಿ ಆಯೋಗವನ್ನು ಜನವರಿ 1ರಂದು ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.