ADVERTISEMENT

ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 9:37 IST
Last Updated 30 ಜೂನ್ 2016, 9:37 IST
ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ   

ಬಾಲಸೊರಿ(ಪಿಟಿಐ): ಭಾರತ ಮತ್ತು ಇಸ್ರೇಲ್‌ ಜಂಟಿಯಾಗಿ ಸಿದ್ಧಪಡಿಸಿರುವ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಗುರುವಾರ ಒಡಿಶಾದ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಮಧ್ಯಮ ದೂರದ ಕ್ಷಿಪಣಿಯನ್ನು ಇಸ್ರೇಲ್‌ ಜತೆ ಜಂಟಿಯಾಗಿ ಸಿದ್ಧಪಡಿಸಿದ್ದು, ಕರಾವಳಿ ತೀರದ ಚಾಂದೀಪುರದ ಸಂಯುಕ್ತ ಪರೀಕ್ಷಾ ವಲಯದಲ್ಲಿ ಬೆಳಿಗ್ಗೆ 8.15ಕ್ಕೆ ಯಶಸ್ವಿ ಉಡಾವಣೆ ನಡೆಸಲಾಯಿತು ಎಂದು ಡಿಆರ್‌ಡಿಓನ ಅಧಿಕಾರಿ ಹೇಳಿದ್ದಾರೆ.

ಕ್ಷಿಪಣಿ ತನ್ನ ಗುರಿಯನ್ನು ಕರಾರುವಕ್ಕಾಗಿ ತಲುಪಿದೆ. ಮಾನವ ರಹಿತ ವಾಹನ (ಯುಎವಿ) ಬಾನ್‌ಶೀಗೆ ಗುರಿಯಾಗಿರಿಸಿ ಉಡಾವಣೆ ನಡೆಸಲಾಯಿತು. ರಾಡಾರ್‌ನಿಂದ ಸಂಕೇತಗಳ ಸಂಪರ್ಕ ಪಡೆಯುತ್ತಿದ್ದಂತೆ ಕಾರ್ಯಾರಂಭ ಮಾಡಿದ ಕ್ಷಿಪಣಿ ಗುರಿಯನ್ನು ಯಶಸ್ವಿಯಾಗಿ ತಲುಪಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಡಿಆರ್‌ಡಿಎಲ್‌, ಹೈದರಾಬಾದ್‌ನ ಡಿಆರ್‌ಡಿಓ ಹಾಗೂ ಇಸ್ರೇಲ್‌ನ ಐಎಐ(ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌) ಜಂಟಿಯಾಗಿ ಕ್ಷಿಪಣಿ ಅಭಿವೃದ್ಧಿಪಡಿಸಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಚಾಂದೀಪುರದ 2.5 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ 3,652 ನಾಗರಿಕರನ್ನು ಸ್ಥಳಾಂತರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.