ADVERTISEMENT

ಪಾಕ್‌ನಿಂದ ಗುಂಡಿನ ದಾಳಿ: ನಾಗರಿಕ ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 7:01 IST
Last Updated 4 ಆಗಸ್ಟ್ 2015, 7:01 IST

ಜಮ್ಮು (ಪಿಟಿಐ): ಪಾಕಿಸ್ತಾನದ ಸೈನಿಕರು ಮಂಗಳವಾರ ಬೆಳಗಿನ ಜಾವ ಕದನ ವಿರಾಮ ಉಲ್ಲಂಘಿಸಿ ಜಮ್ಮು ಜಿಲ್ಲೆಯ ಪಲ್ಲನ್‌ವಾಲಾ, ಕಂಚಕ್‌  ಹಾಗೂ  ಗಡಿ ವಲಯದಲ್ಲಿ ಗುಂಡಿನ ಮತ್ತು ಶೆಲ್‌ ದಾಳಿ ನಡೆಸಿದ ಪರಿಣಾಮ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.  

ಪಾಕಿಸ್ತಾನದ ಸೈನಿಕರು ಬೆಳಗಿನ ಜಾವ 5.30ರ  ವೇಳೆಗೆ ಅಪ್ರಚೋದಿತರಾಗಿ ನಡೆಸಿದ ಈ ದಾಳಿಗೆ ಭಾರತದ ಸೈನಿಕರು ಗುಂಡಿನಿಂದಲೇ ಮಾರುತ್ತರ ನೀಡಿದರು. ಗುಂಡಿನ ಚಕಮಕಿ ವೇಳೆ  ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಯುವಕನನ್ನು ಸಂಜಯ್‌ ಕುಮಾರ್‌ ಎಂದು ಗುರುತಿಸಲಾಗಿದೆ. ದಾಳಿ ಸಂದರ್ಭದಲ್ಲಿ ಭಾರತೀಯ ಯೋಧರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಸೈನಿಕರು ಕಳೆದ ಶನಿವಾರ ಆರ್.ಎಸ್.ಪುರ ವಲಯದಲ್ಲಿ ಮತ್ತು ಭಾನುವಾರ ಅಖ್ನೂರ್ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದರು. ಪಾಕಿಸ್ತಾನದ ಸೈನಿಕರು ಜುಲೈನಲ್ಲಿ 18 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ. ಈ ಘಟನೆಗಳಲ್ಲಿ ಒಟ್ಟು ಮೂವರು ಯೋಧರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT