ADVERTISEMENT

ಬಾಂಗ್ಲಾ ಗಡಿಯಲ್ಲಿ ರೂ. 15 ಲಕ್ಷ ಮೌಲ್ಯದ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 14:14 IST
Last Updated 18 ಏಪ್ರಿಲ್ 2015, 14:14 IST

ಕೋಲ್ಕತ್ತ(ಐಎಎನ್‌ಎಸ್‌): ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯಲ್ಲಿರುವ  ಬಾಂಗ್ಲಾ ದೇಶದ ಗಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯನ್ನು ಗಡಿ ಭದ್ರತಾ ಪಡೆಯ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದಿದ್ದಾರೆ.

ಸುತಿಯಾ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ 15 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದ ಐದು ಬಿಸ್ಕತ್ತು, ಹಾಲ್ದರಪರ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ 14 ಸಾವಿರ ರೂಪಾಯಿ ಮೌಲ್ಯದ   400 ಗ್ರಾಮ್‌ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಉಭಯ ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಾಂಗ್ಲಾದೇಶಕ್ಕೆ ಸೇರಿದವರೆಂದು ಶಂಕಿಸಲಾಗಿದೆ.

ADVERTISEMENT

ಈ ವರ್ಷ ಬಿಎಸ್‌ಎಫ್‌ ಯೋಧರು, 2.65 ಕೋಟಿ ರೂಪಾಯಿ ಮೌಲ್ಯದ  39 ಕೆಜಿ ಬಂಗಾರ ವಶ ಪಡಿಸಿಕೊಂಡಿದ್ದು, 11ಕಳ್ಳಸಾಗಣೆದಾರರನ್ನು  ಸೆರೆಹಿಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.