ADVERTISEMENT

ಬಾಲಕಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 19:30 IST
Last Updated 6 ಜೂನ್ 2014, 19:30 IST

ಫಿರೋಜಾಬಾದ್‌ (ಪಿಟಿಐ): ಫಿರೋಜಾಬಾದ್‌ನ ಫರೀಹಾ ಪ್ರದೇಶದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನೆರೆಯ ವ್ಯಕ್ತಿಯೇ ಗುರುವಾರ ಅತ್ಯಾಚಾರ ಎಸಗಿದ್ದಾನೆ. ಮನೆಯ ಸಮೀಪ ಆಟವಾಡುತ್ತಿದ್ದ ಬಾಲಕಿಯನ್ನು ಉಮೇಶ್‌ ಎಂಬ ವ್ಯಕ್ತಿ ಜೊತೆಗೆ ಕರೆದೊಯ್ದು  ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡು ಬಾಲಕಿ ಮನೆಗೆ ಬಂದಾಗ ಮನೆಯವರಿಗೆ ವಿಷಯ ತಿಳಿಯಿತು. ನಂತರ ಬಾಲಕಿಯ ಹೆತ್ತವರು ಫರೀಹಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ಮಹಾರಾಜ್‌ ಗಂಜ್‌ ಜಿಲ್ಲೆಯ ನೌತನ್ವಾ ಎಂಬಲ್ಲಿ ಹದಿಹರೆ ಯದ ಬಾಲಕಿಯ ಮೇಲೆ ನೆರೆಹೊರೆಯಲ್ಲಿ
ವಾಸಿಸುತ್ತಿರುವ ಮಝರ್‌ ಎಂಬ ಯುವಕ ಅತ್ಯಾಚಾರ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.