ADVERTISEMENT

‘ಬಿಗ್‌ ಬಾಸ್’ ಕಾರ್ಯಕ್ರಮ ಆಯೋಜಿಸುತ್ತಿದ್ದ ಗುರ್ಮೀತ್‌!

ಪಿಟಿಐ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
‘ಬಿಗ್‌ ಬಾಸ್’ ಕಾರ್ಯಕ್ರಮ ಆಯೋಜಿಸುತ್ತಿದ್ದ ಗುರ್ಮೀತ್‌!
‘ಬಿಗ್‌ ಬಾಸ್’ ಕಾರ್ಯಕ್ರಮ ಆಯೋಜಿಸುತ್ತಿದ್ದ ಗುರ್ಮೀತ್‌!   

ಚಂಡೀಗಡ: ’ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಬಿಗ್‌ ಬಾಸ್‌ ಮಾದರಿ ಕಾರ್ಯಕ್ರಮಗಳನ್ನು ತನ್ನ ರಹಸ್ಯ ಗುಹೆಗಳಲ್ಲಿ ದಂಪತಿಗಳಿಗೆ ಆಯೋಜಿಸುತ್ತಿದ್ದ’ ಎಂದು ಗುರ್ಮೀತ್‌ ದತ್ತು ಪುತ್ರಿ ಎನ್ನಲಾದ ಹನಿಪ್ರೀತ್‌ ಮಾಜಿ ಪತಿ ವಿಶ್ವಾಸ ಗುಪ್ತಾ ಬಹಿರಂಗಪಡಿಸಿದ್ದಾರೆ.

‘ಆರು ದಂಪತಿಗಳು 28 ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಾಗಿತ್ತು’ ಎಂದು ತಿಳಿಸಿದ್ದಾರೆ.

‘ಜೈಲಿನಲ್ಲಿದ್ದರೂ ಗುರ್ಮೀತ್‌ ಈಗಲೂ ಅತ್ಯಂತ ಪ್ರಭಾವಿ ವ್ಯಕ್ತಿ. ಹೀಗಾಗಿ ಆತನ ವಿರುದ್ಧ ಮಾತನಾಡಿದ್ದಕ್ಕೆ ನನ್ನನ್ನು ಕೊಲೆ ಮಾಡಬಹುದು. ನನ್ನ ಜೀವಕ್ಕೆ ಬೆದರಿಕೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.