ADVERTISEMENT

ಬಿಯಾಸ್‌್ ದುರಂತ: ಮತ್ತೊಂದು ಶವ ಪತ್ತೆ

ವಿದ್ಯಾರ್ಥಿಗಳಿಗಾಗಿ ಮುಂದುವರಿದ ಶೋಧ ಕಾರ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2014, 19:30 IST
Last Updated 11 ಜೂನ್ 2014, 19:30 IST

ಮಂಡಿ (ಹಿಮಾಚಲಪ್ರದೇಶ), (ಪಿಟಿಐ): ಹಿಮಾಚಲಪ್ರದೇಶದ ಥಾಲೋಟ್‌ ಸಮೀಪ ಬಿಯಾಸ್‌ ನದಿ­ಯಲ್ಲಿ ಕೊಚ್ಚಿ ಹೋದ ಹೈದರಾ­
ಬಾ­ದ್‌ನ ವಿಎನ್‌ಆರ್‌ ಕಾಲೇಜಿನ 24 ವಿದ್ಯಾರ್ಥಿಗಳಲ್ಲಿ ಮತ್ತೊಬ್ಬನ ಶವ ಬುಧ­ವಾರ ಪತ್ತೆಯಾಗಿದ್ದು,  ಇನ್ನೂ 18 ಮಂದಿಗಾಗಿ ಶೋಧ  ಮುಂದುವರಿದಿದೆ.

ಲಾರ್ಜಿ ಜಲವಿದ್ಯುತ್‌ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದ್ದು, ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈವರೆಗೆ ಆರು ಶವಗಳು ಪತ್ತೆಯಾ­ಗಿವೆ. ಎಂ.ಡಿ.ಶಬೀರ್‌್ ಹುಸೇನ್‌್ ಶೇಕ್‌್ ಎಂಬಾತನ ಶವ ಬುಧವಾರದ ಶೋಧ ಕಾರ್ಯದಲ್ಲಿ ಸಿಕ್ಕಿದೆ. ಆತನ ತಾಯಿ ಆಯೆಷಾ ಬೇಗಂ ಅವರು ಮಗನ ಶವ ಗುರುತಿಸಿದರು.

ನಾಪತ್ತೆಯಾದ ವಿದ್ಯಾರ್ಥಿಗಳ ಕುಟುಂಬ­ದವರ ಜತೆ ತೆಲಂಗಾಣ ಗೃಹ ಸಚಿವ ಎನ್‌.ನರಸಿಂಹ ರೆಡ್ಡಿ ಅವರು ಕಳೆದ ಎರಡು ದಿನಗಳಿಂದ ಮಂಡಿ­ಯಲ್ಲೇ ಬೀಡು ಬಿಟ್ಟಿದ್ದಾರೆ.

ಸೇನೆ ನೆರವು ಕೇಳಿದ ತೆಲಂಗಾಣ ಸರ್ಕಾರ: ಶೋಧ ಕಾರ್ಯವನ್ನು ತ್ವರಿತ­ಗೊಳಿ­ಸಲು ತೆಲಂಗಾಣ ಸರ್ಕಾರ ಸೇನೆಯ ನೆರವು ಕೇಳಿದೆ.

ಭಯಾನಕ ವಿಡಿಯೊ ದೃಶ್ಯಾವಳಿ
ಬಿಯಾಸ್‌್ ನದಿಯ ಬಂಡೆಗಳ ಮೇಲೆ ನಿಂತು ಖುಷಿಯಿಂದ ಛಾಯಾಚಿತ್ರ ತೆಗೆಯುತ್ತಿದ್ದ ವಿದ್ಯಾರ್ಥಿಗಳು ಏಕಾಏಕಿ ರಭಸದ ನೀರಿನಲ್ಲಿ ಕೊಚ್ಚಿ ಹೋದ ಭಯಾನಕ ದೃಶ್ಯಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ನೀರಿನ ಸೆಳವಿಗೆ ಸಿಕ್ಕಿದ ವಿದ್ಯಾರ್ಥಿಗಳು ಕಂಗಾಲಾಗಿ ಬೊಬ್ಬೆ ಹಾಕುತ್ತಿದ್ದ ದೃಶ್ಯಗಳು ಯೂಟ್ಯೂಬ್‌ನಲ್ಲಿ ಹರಿದಾ­ಡುತ್ತಿವೆ. ಕೆಲವರು ಈಜಿ ದಡ ಸೇರಲು ಹೆಣಗಾಡುತ್ತಿದ್ದ ದೃಶ್ಯ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT