ADVERTISEMENT

ಬಿಯಾಸ್‌ ದುರಂತ: 3 ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಮಂಡಿ (ಪಿಟಿಐ):  ಬಿಯಾಸ್‌ ನದಿ ದುರಂತದಲ್ಲಿ ಮೃತಪಟ್ಟ ಹೈದರಾ ಬಾದ್‌ ಎಂಜಿನಿಯರಿಂಗ್‌ ಕಾಲೇಜಿನ ಮೂವರು ವಿದ್ಯಾರ್ಥಿಗಳ ಶವ ಭಾನು ವಾರ ಪತ್ತೆಯಾಗಿದೆ. ಈವರೆಗೆ 16 ಮೃತದೇಹಗಳು ಪತ್ತೆಯಾಗಿವೆ.
 
ರಕ್ಷಣಾ ಕಾರ್ಯಾಚರಣೆ ತಂಡ ಈ ಮೃತದೇಹಗಳನ್ನು ಪತ್ತೆಹಚ್ಚಿದೆ ಎಂದು ಮಂಡಿ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಎಸ್.ನೇಗಿ ಹೇಳಿದ್ದಾರೆ. ಮೃತದೇಹಗಳ ಪತ್ತೆಗೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದಕ್ಕಾಗಿ 600 ರಕ್ಷಣಾ ಕಾರ್ಯಾ ಚರಣೆ ಸಿಬ್ಬಂದಿ, ಸೇನಾ ಸಿಬ್ಬಂದಿ, ಪೊಲೀಸರು, ಐಟಿಬಿಪಿ ಯೋಧರು ಮತ್ತು 40 ಮುಳುಗುತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಜೂ.8 ರಂದು ಬಿಯಾಸ್‌ ನದಿಯಲ್ಲಿ ಹೈದರಾಬಾದ್‌ನ ವಿಜ್ಞಾನ ಜ್ಯೋತಿ ಎಂಜಿನಿಯರಿಂಗ್‌ ಕಾಲೇಜಿನ 24 ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.