ADVERTISEMENT

ಬಿರು ಗಾಳಿ: ಮರ ಉರುಳಿ 3 ಕೂಲಿ ಕಾರ್ಮಿಕರು ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 14:23 IST
Last Updated 1 ಜುಲೈ 2016, 14:23 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಇಡುಕ್ಕಿ(ಪಿಟಿಐ): ಬಿರು ಗಾಳಿಗೆ ಮರ ಉರುಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಸಾವಿಗೀಡಾಗಿದ್ದು, ಒಬ್ಬ ಗಂಭೀರ ಗಾಯಗೊಂಡಿರುವ ಘಟನೆ ಕೇರಳದ ಅಡಿಮಲಿ ಸಮೀಪದ ಕುಂಜಿತನಿಯಲ್ಲಿ  ಶುಕ್ರವಾರ ಸಂಭವಿಸಿದೆ.

‘ಮರ ಮೇಲೆ ಬಿದ್ದ ಪರಿಣಾಮ ಪಂಚಿಯಮ್ಮ, ಪುಷ್ಪಾ ಹಾಗೂ ಮೆರ್ಸಿ ಎಂಬ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ’ ಎಂದು ಕಾರ್ಡೋಮಮ್ ಎಸ್ಟೇಟ್‍ ನ ಪೊಲೀಸ್ ನಿಲಿಕಾಡ್ ಜಾನ್ಸನ್ ತಿಳಿಸಿದ್ದಾರೆ.

‘ರಾತ್ರಿ 2ರಿಂದಲೇ  ಪೂರ್ವ ದಿಕ್ಕಿನಿಂದ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು, ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೇರಳದ ಕರಾವಳಿ ಹಾಗೂ ಲಕ್ಷದ್ವೀಪವನ್ನು ಬಿರುಗಾಳಿ ತಲುಪುವ ಸಾಧ್ಯತೆಯಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.