ADVERTISEMENT

ಬಿಸ್ಮಿಲ್ಲಾ ಖಾನ್‌ ಪುರಸ್ಕಾರ: 33 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2014, 9:08 IST
Last Updated 31 ಮೇ 2014, 9:08 IST

ನವದೆಹಲಿ (ಐಎಎನ್‌ಎಸ್‌): 2012ನೇ ಸಾಲಿನ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರ ಪ್ರಶ್ತಸಿಗೆ 33 ಯುವ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಗೀತ ನಾಟಕ ಅಕಾಡೆಮಿ ಶನಿವಾರ ತಿಳಿಸಿದೆ.

ಆಯ್ಕೆಯಾದ ಕಲಾವಿದರು ಸಂಗೀತ, ನೃತ್ಯ, ರಂಗಭೂಮಿ, ಜನಪದ, ಸಾಂಪ್ರದಾಯಿಕ, ಬುಡಕಟ್ಟು ನೃತ್ಯ ಸೇರಿದಂತೆ ಕಾರ್ಯನಿರತ ವಿವಿಧ ಕಲಾ ಶಾಲೆಗಳಿಗೆ ಸೇರಿದವರು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

‘ತಲಾ ಎಂಟು ಸಂಗೀತಗಾರರು, ನೃತ್ಯಗಾರರು, ರಂಗಭೂಮಿ ಕಲಾವಿದರು ಹಾಗೂ ಜನಪದ ಕಲಾ ಪ್ರದರ್ಶಕರು ಸೇರಿದಂತೆ 2012ರ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ 33 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕರ್ಣಾಟಿಕ್ ಸ್ವರ ಸಂಗೀತ ಪ್ರಶಸ್ತಿಯನ್ನು ಇಬ್ಬರು ಕಲಾವಿದರು ಹಂಚಿಕೊಂಡಿದ್ದಾರೆ’  ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಸಂಗೀತ, ನೃತ್ಯ ಹಾಗೂ ರಂಗಭೂಮಿಯಲ್ಲಿ ಯುವ ಜನಾಂಗದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ಅಕಾಡೆಮಿ, 2006ರಿಂದಲೂ ಉಸ್ತಾದ್ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರವನ್ನು ನೀಡುತ್ತಿದೆ.

40 ವರ್ಷಕ್ಕೂ ಕೆಳಗಿನ ಕಲಾವಿದರಿಗೆ  ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತ 25 ಸಾವಿರ ರೂಪಾಯಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.