ADVERTISEMENT

ಬಿಹಾರದಲ್ಲಿ ಏ.1ರಿಂದ ಮದ್ಯ ನಿಷೇಧ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:43 IST
Last Updated 26 ನವೆಂಬರ್ 2015, 19:43 IST

ಪಟ್ನಾ (ಐಎಎನ್‌ಎಸ್‌): ಮುಂದಿನ ವರ್ಷದ ಏಪ್ರಿಲ್‌ 1ರಿಂದ ಬಿಹಾರ ಮದ್ಯಮುಕ್ತ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಗುರುವಾರ ಪ್ರಕಟಿಸಿದರು.

ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ಪ್ರತಿಜ್ಞೆಯನ್ನು ಈಡೇರಿಸುತ್ತಿದ್ದು, 2016ರ ಏಪ್ರಿಲ್ 1ರಿಂದ ರಾಜ್ಯದಾದ್ಯಂತ ಮದ್ಯ ನಿಷೇಧ ಮಾಡುವುದಾಗಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಬಡವರಲ್ಲಿಯೇ ಅತಿ ಬಡವರೇ  ಮದ್ಯ ಸೇವಿಸುತ್ತಿದ್ದಾರೆ. ಇದರಿಂದ ಅವರ ಕುಟುಂಬ ಮತ್ತು ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮದ್ಯ ಸೇವನೆಯ ಹೆಚ್ಚಳವು ಆಂತರಿಕ ಹಿಂಸಾಚಾರ, ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರ ಮೇಲಿನ ಹಿಂಸೆಗೆ ಪ್ರಮುಖ ಕಾರಣ. ಅಪರಾಧಗಳ ಹೆಚ್ಚಳಕ್ಕೆ ಸಹ ಇದು ಎಡೆಮಾಡಿ ಕೊಡುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.