ಪಾಟ್ನಾ(ಪಿಟಿಐ): ಬಿಹಾರದ ಮಾಜಿ ಸಚಿವ ಎಜಾಝ್-ಉಲ್- ಹಕ್ ಮೇಲೆ ಪರಿಚಿತ ವ್ಯಕ್ತಿಯೊಬ್ಬ ಅವರ ನಿವಾಸದಲ್ಲೇ ದಾಳಿ ನಡೆಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಎಜಾಝ್ ತೀವ್ರವಾಗಿ ಗಾಯಗೊಂಡಿದ್ದಾರೆ. ಎಜಾಝ್-ಉಲ್- ಹಕ್ ಅವರು ಈಗಾಗಲೇ ಜೈಲುಪಾಲಾಗಿರುವ ಕುಖ್ಯಾತ ರೌಡಿ–ರಾಜಕಾರಣಿ ಮಹಮ್ಮದ್ ಶಹಾಬುದ್ದೀನ್ ಅವರ ಬಾವ.
ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ರಾಘವೇಂದ್ರ ಸಿಂಗ್ ಎಂಬಾತನನ್ನು ಪೊಲೀಸರು ಬೋಜ್ಪುರ್ ಜಿಲ್ಲೆಯಿಂದ ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಏನು ಎನ್ನುವುದರ ಕುರಿತು ತನಿಖೆ ನಡೆದಿದೆ ಎಂದು ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ವೈಭವ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.