ADVERTISEMENT

ಬೆನ್ನಿಗೆ ಚೂರಿ ಹಾಕಿದ ಎಎಪಿ: ಮೋದಿ ದಾಳಿ

ದೆಹಲಿ ಪ್ರಚಾರ ಸಭೆಯಲ್ಲಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 20:14 IST
Last Updated 31 ಜನವರಿ 2015, 20:14 IST

ನವದೆಹಲಿ: ಬಿಜೆಪಿ ಮತ್ತು ಎಎಪಿ ನಡುವೆ ‘ಜಿದ್ದಾಜಿದ್ದಿ’ಗೆ ಸಾಕ್ಷಿಯಾಗಿ­ರುವ ದೆಹಲಿ ವಿಧಾನಸಭೆ ಚುನಾ­ವಣೆ ಬಹಿರಂಗ ಪ್ರಚಾರದಲ್ಲಿ ಶನಿವಾರ ಎರಡನೆ ಪಾಲಿಗೆ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಆಪ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ಕಟುವಾಗಿ ಟೀಕಿಸಿದರು.

‘ಎಎಪಿ ಬೆನ್ನಿಗೆ ಚೂರಿ ಹಾಕುವ ಪಕ್ಷವಾಗಿದ್ದು, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆ ಪಕ್ಷಕ್ಕೆ ಮತ ಹಾಕುವ ತಪ್ಪನ್ನು ಮತ್ತೆ ಪುನರಾವರ್ತಿಸಬೇಡಿ’ ಎಂದು ದೆಹಲಿ ನಾಗರಿಕರಿಗೆ ಪ್ರಧಾನಿ ಕರೆ ನೀಡಿದರು.

‘ಹೋದ ಸಲ ಬೆಂಬಲ ಪಡೆ­ದವರು ನಿಮ್ಮ ಬೆನ್ನಿಗೆ  ಚೂರಿ ಹಾಕಿದರು. ನೀವು ಕಂಡಿದ್ದ ಕನಸುಗಳನ್ನು ಛಿದ್ರಗೊ­ಳಿಸಿ­ದರು. ಈ ಸಲವೂ ಅದೇ ತಪ್ಪು ಮಾಡ­ಬೇಡಿ ಕೆಲವರ ಬಣ್ಣದ ಮಾತುಗಳಿಗೆ ಬೆರಗಾಗಬೇಡಿ.

ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟರೆ ದೆಹಲಿ ಅಭಿವೃದ್ಧಿ ಸಾಧ್ಯವಾಗಲಿದೆ. ಈ ಹಿಂದೆ ಎಂದೂ ನೋಡದಂತಹ ಸ್ವಚ್ಛ ಹಾಗೂ ಸ್ಥಿರ

ಮಹಿಳಾ ಸುರಕ್ಷತೆಗೆ 10 ಲಕ್ಷ ಸಿಸಿಟಿವಿ ಕ್ಯಾಮೆರಾ

ನವದೆಹಲಿ (ಪಿಟಿಐ): ಅಗ್ಗದ ದರದಲ್ಲಿ ನಿರಂತರ ವಿದ್ಯುತ್‌ ಹಾಗೂ ನೀರಿನ ಸಂಪರ್ಕ, ಗಣನೀಯ ಪ್ರಮಾಣ­ದಲ್ಲಿ ಮೌಲ್ಯ­­ವರ್ಧಿತ ತೆರಿಗೆ ಕಡಿತ, ಮಹಿಳೆ­ಯರ ಸುರಕ್ಷತೆಗೆ ದೆಹಲಿಯಾದ್ಯಂತ ಕನಿಷ್ಠ 10 ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಉಚಿತ ವೈ–ಫೈ ಸೌಲಭ್ಯ ...

– ಇವು ಶನಿವಾರ ಬಿಡುಗಡೆಯಾದ ಆಮ್‌ ಆದ್ಮಿ ಪಕ್ಷದ ಪ್ರಣಾಳಿಕೆಯಲ್ಲಿ ರುವ ಪ್ರಮುಖ ಭರವಸೆಗಳು.  ದೆಹಲಿಯ ಎಲ್ಲ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟು­ಕೊಂಡು ಸಿದ್ಧಪಡಿಸಿದ ಪ್ರಣಾಳಿಕೆ ಇದಾಗಿದೆ. 2013ರ ಚುನಾವಣೆಯಲ್ಲಿ   ಬಿಡುಗಡೆ ಮಾಡಿದ್ದ ಪ್ರಣಾಳಿಕೆ­ಯ­ಲ್ಲಿಯ ಪ್ರಮುಖ ವಿಷಯ­ಗಳನ್ನೇ ಈ ಬಾರಿಯೂ ಉಳಿ­ಸಿಕೊಳ್ಳಲಾಗಿದೆ.

‘ಇದು ಕೇವಲ ಪಕ್ಷದ ಮತ್ತೊಂದು ಚುನಾವಣಾ ಪ್ರಣಾಳಿಕೆ ಮಾತ್ರವಲ್ಲ. ಇದು ನಮ್ಮ ಪಾಲಿನ ಗೀತೆ, ಕುರಾನ್‌, ಬೈಬಲ್‌ ಹಾಗೂ ಗುರು ಗ್ರಂಧ ಸಾಹಿಬ್‌’ ಎಂದು ಪ್ರಣಾಳಿಕೆ  ಬಿಡು­ಗಡೆ ಮಾಡಿದ ಆಮ್ ಆದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದರು.

‘ದೆಹಲಿಯ ಸಮಸ್ಯೆಗಳ ಕುರಿತು ನಾಲ್ಕು ತಿಂಗಳು ನಡೆಸಿದ ಅವಿರತ ಶೋಧನೆ ಶ್ರಮವಾಗಿ ಈ ಪ್ರಣಾಳಿಕೆ ಜೀವ ತೆಳೆದಿದೆ. ದೆಹಲಿಯ ಪ್ರತಿಯೊಬ್ಬ ನಾಗ­ರಿಕನೂ ತಾನು ಈ ನಗರದ ನಿವಾಸಿ ಎಂದು ಹೆಮ್ಮೆಯಿಂದ ಗುರುತಿಸಿ­ಕೊಳ್ಳ­ಬೇಕು. ಎಲ್ಲ ಜಾತಿ, ಧರ್ಮ ಹಾಗೂ ವರ್ಗದ ಜನರಿಗೂ ಸಮಾನ  ಅವಕಾಶ ಕಲ್ಪಿಸಲಾಗುವುದು’ ಎಂದರು.
ಪ್ರಣಾಳಿಕೆ ಬಿಡುಗಡೆ ಮಾಡದೇ ಇರುವ ಬಿಜೆಪಿ ವಿರುದ್ಧ ಹರಿಹಾಯ್ದ ಕೇಜ್ರಿವಾಲ್‌,  ಲೋಕಸಭಾ ಚುನಾವಣೆಯಲ್ಲಿ ನೀಡಿದ ಭರವಸೆಗಳ ಪೈಕಿ ಒಂದೂ ಭರವಸೆ­ಯನ್ನು ಈಡೇರಿಸದ ಬಿಜೆಪಿಗೆ ದೆಹಲಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾರ್ಯ­ಸೂಚಿಯೇ ಇಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.

ADVERTISEMENT

ಆಡಳಿತವನ್ನು ನಾವು ನೀಡುತ್ತೇವೆ.  ರಾಜಧಾನಿಯಲ್ಲಿ ಕಿರಣ್‌ ಬೇಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಶುದ್ಧ ಹಾಗೂ ಪಾರದರ್ಶಕ ಆಡಳಿತ ಕೊಡುತ್ತೇವೆ’ ಎಂದೂ ಆಶ್ವಾಸನೆ ನೀಡಿದರು.

ಇಲ್ಲಿಯ ಕರ್‌ಕರ್‌ಡೂಮಾದ ಸಿಬಿಡಿ ಮೈದಾನದಲ್ಲಿ ಸೇರಿದ್ದ ಬಿಜೆಪಿ ಬೆಂಬಲಿಗ­ರನ್ನು ಉದ್ದೇಶಿಸಿ ಮೋದಿ ಸುಮಾರು ಅರ್ಧ ಗಂಟೆ ಮಾತನಾಡಿ­ದರು. ತಮ್ಮ ಭಾಷಣದ ಹೆಚ್ಚಿನ ಸಮ­ಯವನ್ನು ಕೇಜ್ರಿವಾಲ್‌ ಅವರನ್ನು ಟೀಕಿ­ಸು­ವುದಕ್ಕೆ ಬಳಸಿಕೊಂಡರು. ಕಾಂಗ್ರೆಸ್‌ ಪಕ್ಷದ ಕುರಿತು ಅವರು ಹೆಚ್ಚು ಪ್ರಸ್ತಾ­ಪಿಸಲಿಲ್ಲ. ಪ್ರಧಾನಿ ವೇದಿಕೆಗೆ ಬರುವ ಮೊದಲು ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೂ ಮಾಜಿ ಮುಖ್ಯಮಂತ್ರಿ  ಕೇಜ್ರಿವಾಲ್‌ ಅವರನ್ನು ಟೀಕಿಸುವುದರಲ್ಲಿ ಹಿಂದೆ ಬೀಳಲಿಲ್ಲ.

ಮೋದಿ ಜ. 10ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ ಬಳಿಕ ಬಿಜೆಪಿ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಂಡಿ­ರಲಿಲ್ಲ. ಆ ಸಮಾವೇಶದಲ್ಲಿ ಜನರು ನಿರೀಕ್ಷಿತ ಪ್ರಮಾಣದಲ್ಲಿ ಸೇರದ್ದರಿಂದ ಆತಂಕ­ಕ್ಕೊಳ­ಗಾಗಿದ್ದ ಬಿಜೆಪಿ ಅವಸರದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಅವರನ್ನು ಕರೆತಂದು ಮುಖ್ಯ­ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಬಳಿಕ ನಡೆದ ಮೋದಿ ಅವರ ಮೊದಲ ಪ್ರಚಾರ ಸಭೆ ಇದು.

ಖಾಲಿ ಕುರ್ಚಿಗಳು: ಈ ಸಭೆಯಲ್ಲೂ ನಿರೀಕ್ಷಿತ ಪ್ರಮಾಣ­ದಲ್ಲಿ ಜನರು ಪಾಲ್ಗೊಂಡಿ­ರಲಿಲ್ಲ. ಚಿಕ್ಕದಾದ ಮೈದಾನ­ದಲ್ಲಿ ಹಾಕಲಾಗಿದ್ದ ಕುರ್ಚಿ­ಗಳು ಖಾಲಿ ಉಳಿದಿದ್ದವು. ಪ್ರತಿ ಸಾಲು ಕುರ್ಚಿಗಳ ನಡುವಿನ ಅಂತರ ಒಂದು ಮಾರಿಗೂ ಹೆಚ್ಚಿತ್ತು. ಕುರ್ಚಿಗಳ ನಡುವೆ ಜನ ನಿಂತಿದ್ದರು. ವೇದಿಕೆ ಮುಂಭಾಗ­ದಲ್ಲಿ ಮಾತ್ರ ಮೋದಿ ಅವರನ್ನು ನೋಡಲು ಜನ ಮುಗಿ ಬೀಳುತ್ತಿದ್ದರು. ಹಿಂಭಾಗದಲ್ಲಿ ಬಹಳಷ್ಟು ಜಾಗ ಖಾಲಿ ಉಳಿದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.