ADVERTISEMENT

ಬೊಡೊ ದಾಳಿ: ಸಾವಿನ ಸಂಖ್ಯೆ 62ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2014, 10:08 IST
Last Updated 24 ಡಿಸೆಂಬರ್ 2014, 10:08 IST

ಗುವಾಹಟಿ (ಪಿಟಿಐ): ರಾಷ್ಟ್ರೀಯ ಡೆಮೊಕ್ರಟಿಕ್ ಫ್ರಂಟ್‌ ಆಫ್‌ ಬೊಡೊಲ್ಯಾಂಡ್‌ ಉಗ್ರಗಾಮಿಗಳು ನಡೆಸಿದ ನಾಲ್ಕು ದಾಳಿ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 62ಕ್ಕೆ ಏರಿಕೆಯಾಗಿದೆ. ದಾಳಿಯ ಸೇಡಿನ ಪ್ರತಿಕಾರವಾಗಿ ಆದಿವಾಸಿ ಗ್ರಾಮಸ್ಥರು ಬೊಡೊ ನಿವಾಸಗಳಿಗೆ ಬೆಂಕಿ ಹಚ್ಚುವ ಜೊತೆಗೆ ಪ್ರತಿಭಟನೆಯನ್ನು ನಡೆಸಿದ್ದಾರೆ.

ಮಂಗಳವಾರ ಸಂಜೆ ನಡೆದ ‘ಬರ್ಬರ’ ದಾಳಿಯಲ್ಲಿ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ತುತ್ತಾಗಿದ್ದಾರೆ. ದಾಳಿ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್‌ ಗೋಗಯಿ ಅವರು ತಿಳಿಸಿದ್ದಾರೆ.

ಅಸ್ಸಾಂ ರಾಜ್ಯದ ಮನವಿ ಮೇರೆಗೆ ಅರೆ ಸೇನಾ ಪಡೆಯ 5 ಸಾವಿರ ಯೋಧರನ್ನು ರವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ADVERTISEMENT

ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ  62ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸೋನಿತ್‌ಪುರದ 37 ಹಾಗೂ ಕೊಕ್ರಝಾರ್‌ ಜಿಲ್ಲೆಯ 25 ಜನರು ಸೇರಿದ್ದಾರೆ ಎಂದು ಅಸ್ಸಾಂ ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಪೊಲೀಸ್ ಮಹಾನಿರ್ದೇಶಕ ಎಸ್‌.ಎನ್‌. ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.