ADVERTISEMENT

ಭಾರತದಲ್ಲಿ ವಿದೇಶಾಂಗ ಸಚಿವ ವಾಂಗ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 10:41 IST
Last Updated 8 ಜೂನ್ 2014, 10:41 IST

ನವದೆಹಲಿ (ಪಿಟಿಐ):  ಭಾರತದೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಮತ್ತು ನರೇಂದ್ರ ಮೋದಿ ನಾಯಕತ್ವದ ಹೊಸ ಸರ್ಕಾರದ ಜತೆ ರಾಜಕೀಯ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರು ಭಾನುವಾರದಿಂದ ಎರಡು ದಿನ ಭಾರತ ಪ್ರವಾಸದಲ್ಲಿದ್ದಾರೆ

ಬೆಳಿಗ್ಗೆ ನವದೆಹಲಿಗೆ ಆಗಮಿಸಿದ ವಾಂಗ್ ಯೀ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬರಮಾಡಿಕೊಂಡರು. ಬಳಿಕ ಉಭಯ ಸಚಿವರು ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಬಲಪಡಿಸುವಲ್ಲಿ ಸಹಕಾರ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧ, ಗಡಿ ಸಮಸ್ಯೆ, ಭದ್ರತೆ ವಿಚಾರವಾಗಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ವಾಂಗ್ ಅವರು ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಪ್ರತಿಭಟನೆಯ ಸ್ವಾಗತ
ನವದೆಹಲಿ (ಪಿಟಿಐ): ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರ ಭಾರತ ಭೇಟಿ ವಿರೋಧಿಸಿ ಟಿಬೆಟ್ ವಲಸಿಗರು ಭಾನುವಾರ ಪ್ರತಿಭಟನೆ ನಡೆಸಿದರು.ಯಮುನಾ ನದಿ ದಡದಲ್ಲಿರುವ ಟಿಬೆಟಿನ ನಿರಾಶ್ರಿತರ ಪ್ರದೇಶದಲ್ಲಿ ‘ಪ್ರಧಾನಿ ಮೋದಿ ಅವರು ಟಿಬೆಟ್ ನಿರಾಶ್ರಿತರ ಬಗ್ಗೆ ಮಾತುಕತೆ ನಡೆಸಬೇಕು’ ಎಂಬ ಸಂದೇಶವಿರುವ ಬ್ಯಾನರ್ ಹಿಡಿದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT