ADVERTISEMENT

ಭಾರತದ ಇಸ್ಲಾಂ ಧರ್ಮಗುರುಗಳಿಬ್ಬರು ಪಾಕಿಸ್ತಾನದಲ್ಲಿ ನಾಪತ್ತೆ

ಐಎಎನ್ಎಸ್
Published 17 ಮಾರ್ಚ್ 2017, 8:47 IST
Last Updated 17 ಮಾರ್ಚ್ 2017, 8:47 IST
ಚಿತ್ರ ಕೃಪೆ: ಎಎನ್ಐ
ಚಿತ್ರ ಕೃಪೆ: ಎಎನ್ಐ   

ನವದೆಹಲಿ: ಇಲ್ಲಿನ ಹಜರತ್ ನಿಜಾಮುದ್ದೀನ್ ದರ್ಗಾದ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಜಾಮಿ ಮತ್ತು ಸೂಫಿ ಧರ್ಮಗುರುವೊಬ್ಬರು ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದಾರೆ.

ಬುಧವಾರ ಸಂಜೆ ನಂತರ ಈ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ನಿಜಾಮಿ ಅವರ ಪುತ್ರ ಹೇಳಿದ್ದಾರೆ.

ನನ್ನ ಅಪ್ಪ  ಸಯ್ಯದ್ ಆಸಿಫ್ ಅಲಿ ನಿಜಾಮಿ (80) ಅವರು ಲಾಹೋರ್ ವಿಮಾನ ನಿಲ್ದಾಣ ಮತ್ತು ಸಂಬಂಧಿ ನಾಜಿಮ್ ನಿಜಾಮಿ(60) ಅವರು ಕರಾಚಿ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ನಾಪತ್ತೆಯಾಗಿದ್ದಾರೆ ಎಂದು ನಿಜಾಮಿ ಅವರ ಹಿರಿಯ ಮಗ ಸಾಜೀದ್ ಅಲಿ ನಿಜಾಮಿ ಅವರು ಐಎಎನ್‍ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ನನ್ನ ಅಪ್ಪ ಮತ್ತು ಅವರ ಸಂಬಂಧಿ ಮಾರ್ಚ್ 8ರಂದು ಕರಾಚಿಗೆ ಹೋಗಿದ್ದರು. ಅಲ್ಲಿಂದ ಅವರು ಲಾಹೋರ್‍‍ಗೆ ತಲುಪಿ ಬಾಬಾ ಫರೀದ್ ಪವಿತ್ರಕ್ಷೇತ್ರದಲ್ಲಿ  ಚಾದರ್ ಅರ್ಪಿಸಿದ್ದರು.

ಈ ಪ್ರಕರಣದ ಬಗ್ಗೆ ತಾನು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.