ADVERTISEMENT

ಭಿನ್ನ ಸಮಯ ವಲಯ: ನಿರ್ಧಾರ ಕೈಗೊಳ್ಳದ ಸರ್ಕಾರ

ಪಿಟಿಐ
Published 21 ಮಾರ್ಚ್ 2018, 19:40 IST
Last Updated 21 ಮಾರ್ಚ್ 2018, 19:40 IST

ನವದೆಹಲಿ: ದೇಶದಲ್ಲಿ ಭಿನ್ನ ಸಮಯ ವಲಯಗಳನ್ನು ನಿಗದಿ ಮಾಡುವ ಕುರಿತು ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಸರ್ಕಾರ ಲೋಕಸಭೆಗೆ ಬುಧವಾರ ತಿಳಿಸಿದೆ.

‘ಸರ್ಕಾರವು 2002ರಲ್ಲೇ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಸಂಕೀರ್ಣ ಪ್ರಕ್ರಿಯೆ ಇರುವ ಕಾರಣ ಎರಡು ಪ್ರತ್ಯೇಕ ಸಮಯ ವಲಯ ನಿಗದಿಪಡಿಸಲು ಸಮಿತಿಯು ಶಿಫಾರಸು ಮಾಡಿಲ್ಲ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಸಂಸದ ವರುಣ್ ಗಾಂಧಿ ಅವರು ಈ ಸಂಬಂಧ ಪ್ರಶ್ನೆ ಮುಂದಿಟ್ಟಿದ್ದರು.

ವಿಸ್ತಾರವಾದ ಭೂ ಭಾಗವನ್ನು ಹೊಂದಿರುವ ಭಾರತದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಭಿನ್ನವಾಗಿದೆ. ಹೀಗಾಗಿ ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಸಮಯ ವಲಯವನ್ನು ನಿಗದಿಮಾಡಬೇಕು ಎಂಬ ಬೇಡಿಕೆ ದೀರ್ಘ ಕಾಲದಿಂದಲೂ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.