ADVERTISEMENT

ಮಣಿಪುರ ವಿಧಾನಸಭೆ ಅತಂತ್ರ: ಬಹುಮತ ಸಮೀಪದಲ್ಲಿ ಕಾಂಗ್ರೆಸ್‌

ಏಜೆನ್ಸೀಸ್
Published 11 ಮಾರ್ಚ್ 2017, 14:52 IST
Last Updated 11 ಮಾರ್ಚ್ 2017, 14:52 IST
ಸೋಲು ಕಂಡ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ, ಬಿಜೆಪಿ ಸಂಭ್ರಮಾಚರಣೆ
ಸೋಲು ಕಂಡ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ, ಬಿಜೆಪಿ ಸಂಭ್ರಮಾಚರಣೆ   

ಮಣಿಪುರ: ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 28 ಕ್ಷೇತ್ರಗಳಲ್ಲಿ ಗೆಲುವು ಪಡೆದಿದಿದ್ದು, ಬಿಜೆಪಿಯನ್ನು ಹಿಂದಿಕ್ಕಿದೆ. ಆದರೆ, ಸರ್ಕಾರ ರಚನೆಗೆ ಅಗತ್ಯವಿದ್ದ ಬಹುಮತ ಪಡೆಯುವಲ್ಲಿ ಎರಡೂ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್‌ 28 ಕ್ಷೇತ್ರಗಳಲ್ಲಿ ವಿಜಯ ಗಳಿಸಿದೆ. ಬಿಜೆಪಿ 21 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಷ್ಟೇ ಶಕ್ತವಾಗಿದೆ.

ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರ ರಚನೆಗೆ 60 ಸ್ಥಾನಗಳ ಪೈಕಿ 31 ಸ್ಥಾನ ಬೇಕು. ಯಾವ ಪಕ್ಷವೂ ಬಹುಮತ ಪಡೆದಿಲ್ಲ.  ಇದರಿಂದಾಗಿ, ಸರ್ಕಾರ ರಚನೆ ಅತಂತ್ರ ಸ್ಥಿತಿ ನಿರ್ಮಾಣ ವಾಗಿದೆ. 28 ಕ್ಷೇತ್ರಗಳಲ್ಲಿ ಗೆಲುವು ಪಡೆದ ಕಾಂಗ್ರೆಸ್‌ ಸರ್ಕಾರ ರಚನೆಗೆ ಅಗತ್ಯ ಬಹುಮತದ ಸಮೀಪದಲ್ಲಿದೆ.

ADVERTISEMENT

ಇತರ ಪಕ್ಷಗಳಿಂದ ಗೆಲುವು ಪಡೆದ ಹಾಗೂ ಪಕ್ಷೇತರರಾಗಿ ಗೆದ್ದವರ ಬೆಂಬಲ ಪಡೆದು ಯಾರು ಸರ್ಕಾರ ರಚಿಸುತ್ತಾರೆ ಎಂಬುದು ಎಲ್ಲರ ಕತೂಹಲದ ಸಂಗತಿ.

ಎಐಟಿಸಿ ಒಂದು ಕ್ಷೇತ್ರದಲ್ಲಿ, ನಾಗ ಪೀಪಲ್‌ ಫ್ರಂಟ್‌ 4 ಕ್ಷೇತ್ರಗಳಲ್ಲಿ, ಲೋಕಜನ ಶಕ್ತಿ ಪಾರ್ಟಿ 1, ನ್ಯಾಷನಲ್‌ ಪೀಪಲ್ಸ್ ಪಾರ್ಟಿ4 ಕ್ಷೇತ್ರಗಳಲ್ಲಿ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ.

ಇರೋಮ್‌ ಶರ್ಮಿಳಾ ಸೋಲು
ಮಣಿಪುರದಲ್ಲಿ ರಾಜಕೀಯ ಮುನ್ನಡೆ ಬಯಸಿದ್ದ ಸಾಮಾಜಿಕ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಸೋಲು ಕಂಡಿದ್ದಾರೆ. ಶರ್ಮಿಳಾ ಸ್ಪರ್ಧಿಸಿದ್ದ ತೋಬಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಗೆಲುವು ಸಾಧಿಸಿದ್ದಾರೆ.

ಇರೋಮ್‌ ಶರ್ಮಿಳಾ 90 ಮತಗಳನ್ನು ಗಳಿಸಲು ಮಾತ್ರ ಸಾಧ್ಯವಾಗಿದೆ. ಸೇನಾ ವಿಶೇಷಾಧಿಕಾರ ಕಾಯ್ದೆ ರದ್ದತಿಗಾಗಿ 16 ವರ್ಷ ಉಪವಾಸ ಸತ್ಯಾಗ್ರಹ ಮುಗಿಸಿದ ಬಳಿಕ ರಾಜಕೀಯ ಜೀವನದಲ್ಲಿ ಏಳ್ಗೆ ಬಯಸಿದ್ದ ಶರ್ಮಿಳಾ ಪಿಆರ್‌ಜೆಎ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.