ADVERTISEMENT

ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದ ಹಿಂದೂ ಯುವ ವಾಹಿನಿ; ಪೊಲೀಸರಿಂದ ಪ್ರಾರ್ಥನೆಗೆ ತಡೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 11:20 IST
Last Updated 8 ಏಪ್ರಿಲ್ 2017, 11:20 IST
ಕೃಪೆ: ರಾಯಿಟರ್ಸ್
ಕೃಪೆ: ರಾಯಿಟರ್ಸ್   

ಲಖನೌ: ಉತ್ತರಪ್ರದೇಶದ ಚರ್ಚ್ ನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಯುವ ವಾಹಿನಿ ಸಂಘಟನೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಚರ್ಚ್‍ನಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯನ್ನು ಪೊಲೀಸರು ತಡೆದಿದ್ದಾರೆ.

ಶುಕ್ರವಾರ ಚರ್ಚ್ ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಅಮೆರಿಕದ 11 ಪ್ರವಾಸಿಗಳು ಸೇರಿದಂತೆ 150ಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಿದ್ದರು.

ಈ ಪ್ರಾರ್ಥನೆ ವೇಳೆ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತದೆ ಎಂದು ಹಿಂದೂ ಯುವ ವಾಹಿನಿ ಕಾರ್ಯಕರ್ತರು ಆರೋಪಿಸಿದ್ದರು. ಆದರೆ ಚರ್ಚ್ ಗುರುಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಆರಂಭಿಸಿದ ಸಂಘಟನೆಯಾಗಿದೆ ಹಿಂದೂ ಯುವ ವಾಹಿನಿ.

ಚರ್ಚ್‍ನಲ್ಲಿ ನಡೆಯುತ್ತಿದ್ದ ಸಭೆಗೆ ಮುಂಗಡವಾಗಿ ಯಾವುದೇ ಅನುಮತಿ ಪಡೆದಿಲ್ಲ, ಹಾಗಾಗಿ ನಾವು ಸಭೆಯನ್ನು ರದ್ದುಗೊಳಿಸಿ ದೂರು ದಾಖಲಿಸಿದ್ದೇವೆ. ಮತಾಂತರದ ಆರೋಪದ ಬಗ್ಗೆ ತನಿಖೆ ನಡೆದು ಬರುತ್ತಿದೆ ಎಂದು ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ಗುಪ್ತಾ ಹೇಳಿದ್ದಾರೆ.

ನಿರಕ್ಷರರಾಗಿರುವ ಹಿಂದೂಗಳನ್ನು ಇಲ್ಲಿ ಮತಾಂತರ ಮಾಡಲಾಗುತ್ತಿದೆ. ಅಮೆರಿಕದ ಪ್ರಜೆಗಳು ಕೂಡಾ ಭಾಗಿಯಾಗಿರುವುದರಿಂದ ಈ ಸಂದೇಹ ಹುಟ್ಟಿದೆ ಎಂದು ಹಿಂದೂ ಯುವ ವಾಹಿನಿ ನೇತಾರ ಕೃಷ್ಣ ನಂದನ್  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.