ADVERTISEMENT

ಮಥುರಾದಲ್ಲಿ ಭಗವದ್ಗೀತೆ ಸಂಶೋಧನಾ ಕೇಂದ್ರ ಸ್ಥಾಪನೆ : ಉತ್ತರ ಪ್ರದೇಶ ಸಚಿವ ಲಕ್ಷ್ಮಿ ನಾರಾಯಣ ಚೌಧರಿ

ಪಿಟಿಐ
Published 17 ಡಿಸೆಂಬರ್ 2017, 9:45 IST
Last Updated 17 ಡಿಸೆಂಬರ್ 2017, 9:45 IST
ಮಥುರಾದಲ್ಲಿ ಭಗವದ್ಗೀತೆ ಸಂಶೋಧನಾ ಕೇಂದ್ರ ಸ್ಥಾಪನೆ : ಉತ್ತರ ಪ್ರದೇಶ ಸಚಿವ ಲಕ್ಷ್ಮಿ ನಾರಾಯಣ ಚೌಧರಿ
ಮಥುರಾದಲ್ಲಿ ಭಗವದ್ಗೀತೆ ಸಂಶೋಧನಾ ಕೇಂದ್ರ ಸ್ಥಾಪನೆ : ಉತ್ತರ ಪ್ರದೇಶ ಸಚಿವ ಲಕ್ಷ್ಮಿ ನಾರಾಯಣ ಚೌಧರಿ   

ಮಥುರಾ: ‘ದೇವಸ್ಥಾನಗಳ ನಗರಿ ಎಂದೇ ಖ್ಯಾತವಾಗಿರುವ ಮಥುರಾದಲ್ಲಿ ಭಗವದ್ಗೀತೆ ಕುರಿತ ಸಂಶೋಧನಾ ಕೇಂದ್ರ ಸ್ಥಾಪಿಸುತ್ತೇವೆ’ ಎಂದು ಉತ್ತರ ಪ್ರದೇಶದ ಮುಜರಾಯಿ ಮತ್ತು ಸಂಸ್ಕೃತಿ ಸಚಿವ ಲಕ್ಷ್ಮಿ ನಾರಾಯಣ ಚೌಧರಿ ಹೇಳಿದರು.

ಮಥುರಾದಲ್ಲಿನ ಸರ್ಕಾರಿ ವಸ್ತುಸಂಗ್ರಹಾಲಯದ 144ನೇ ವಾರ್ಷಿಕೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ‘ಈ ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದಲ್ಲಿನ ಎಲ್ಲರ ಬೆಂಬಲವೂ ಇದೆ. ಇಲ್ಲಿ ಕೃಷ್ಣನ ಯುಗದ ಗಾಯನ, ವಾದನ ಮತ್ತು ನೃತ್ಯ ಪ್ರಕಾರಗಳ ಕುರಿತು ಅಧ್ಯಯನ ಮಾಡಲಾಗುತ್ತದೆ’ ಎಂದರು.

‘ರಾಜ್ಯದಲ್ಲಿನ ಬ್ರಿಜ್‌ ಭಾಷೆಯಷ್ಟು ಸುಮಧುರವಾದ ಭಾಷೆ ಮತ್ತು ಮಥುರಾದಂತಹ ಕಲೆ ಜಗತ್ತಿನ ಯಾವುದೇ ಭೂಭಾಗದಲ್ಲಿ ಕಾಣಸಿಗುವುದಿಲ್ಲ’ ಎಂದು ಕೊಂಡಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.