ADVERTISEMENT

ಮನೆಯಲ್ಲಿ ಟಿವಿ ನೋಡುತ್ತಿರುವ ಮೋದಿ

​ಪ್ರಜಾವಾಣಿ ವಾರ್ತೆ
Published 16 ಮೇ 2014, 4:05 IST
Last Updated 16 ಮೇ 2014, 4:05 IST

ಗಾಂಧಿನಗರ: ಲೋಕಸಭೆ ಮತ ಎಣಿಕೆ ಶುರುವಾಗುತ್ತಿದ್ದಂತೆ, ಎಲ್ಲರ ಕುತೂಹಲ ಮತ ಎಣಿಕೆ ಕೇಂದ್ರಗಳತ್ತ ನೆಟ್ಟಿದೆ. ಈ ಸಮಯದಲ್ಲಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದೇ ಪ್ರತಿಬಿಂಬಿಸಲಾದ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ? - ಗುಜರಾತಿನ ಗಾಂಧಿನಗರದ ತಮ್ಮ ನಿವಾಸದಲ್ಲಿ ಕುಳಿತು ಟಿವಿ ಚಾನೆಲ್‌ ವೀಕ್ಷಿಸುತ್ತಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಟಿವಿ ಮುಂದೆ ಕದಲದೇ ಕುಳಿತುಕೊಂಡಿರುವ ಮೋದಿ, ಮಧ್ಯಾಹ್ನದತನಕ ಮನೆಯಿಂದ ಹೊರಬರುವ ಸಾಧ್ಯತೆ ಇಲ್ಲ. ಫಲಿತಾಂಶ ಪ್ರಕಟವಾದ ಬಳಿಕವೇ ಹೊರಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಪ್ರಕಟವಾಗುತ್ತಲೇ ಬೇರೆ ಕಡೆ ತೆರಳುವ ಮೊದಲಿಗೆ ತಮ್ಮ ತಾಯಿ ಆಶೀರ್ವಾದ ಪಡೆಯಲಿದ್ದಾರೆ ಎಂದೂ ಮೂಲಗಳು ಹೇಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.