ADVERTISEMENT

ಮಾಂಝಿ ಮಾವಿನ ಹಣ್ಣು ತಿನ್ನದಂತೆ ಪೊಲೀಸ್‌ ಕಾವಲು!?

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 9:22 IST
Last Updated 4 ಜೂನ್ 2015, 9:22 IST

ಪಟ್ನಾ (ಪಿಟಿಐ): ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಂ ಮಾಂಝಿ ಅವರು ಮಾವಿನ ಹಣ್ಣು ಮತ್ತು  ಲಿಚ್ಚಿ ಹಣ್ಣುಗಳನ್ನು ತಿನ್ನದಂತೆ ನೋಡಿಕೊಳ್ಳಲು ಬಿಹಾರ ಸರ್ಕಾರ ಪೊಲೀಸರ ಕಾವಲು ಹಾಕಿದೆ  ಮಾಂಝಿ ಮತ್ತು ಹಿಂದೂಸ್ತಾನ್‌ ಅವಾಮ್‌ ಮೊರ್ಚಾದ ಕಾರ್ಯದರ್ಶಿ ದನಿಷ್‌ ರಿಜ್ವಾನ್‌ ಆರೋಪಿಸಿದ್ದಾರೆ.

ಮಾಂಝಿ ಅವರು ವಾಸವಿರುವ ಬಂಗಲೆಯಲ್ಲಿ ನೂರಾರು ಮಾವಿನ ಮರಗಳು ಮತ್ತು ಲಿಚ್ಚಿ ಹಣ್ಣಿನ ಮರಗಳಿವೆ. ಈ ಮರಗಳಿಂದ ಮಾಂಝಿ ಕುಟುಂಬದವರು ಮತ್ತು ಬೆಂಬಲಿಗರು ಹಣ್ಣುಗಳನ್ನು ಕಿತ್ತು ತಿನ್ನದಂತೆ ಮತ್ತು ಕೆಳಕ್ಕೆ ಬಿದ್ದ ಹಣ್ಣುಗಳನ್ನು ತಿನ್ನದಂತೆ ನೋಡಿಕೊಳ್ಳಲು ನಿತೀಶ್‌ ಕುಮಾರ್‌ ಪೊಲೀಸ್‌ ಕಾವಲು ಹಾಕಿಸಿದ್ದಾರೆ ಎಂದು ರಿಜ್ವಾನ್‌ ಆರೋಪಿಸಿದ್ದಾರೆ.

ಮಾವಿನ ಮರಗಳ ಕಾವಲಿಗೆ 16 ಪೊಲೀಸರು  ಮತ್ತು 8 ಜನ ಇನ್ಸ್‌ಪೆಕ್ಟರ್‌ಗಳನ್ನು ಸೇರಿದಂತೆ 24 ಜನ ಪೊಲೀಸರನ್ನು ನೇಮಿಸಲಾಗಿದೆ.

ನಿತೀಶ್‌ ಕುಮಾರ್‌  ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ರಿಜ್ವಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಜೆಡಿಯು ಪಕ್ಷವನ್ನು ಬೆಂಬಲಿಸುತ್ತಿರುವ ಆರ್‌ಜೆಡಿ ಕೂಡ ನಿತೀಶ್‌ ಮೊದಲು ಜನರಿಗೆ ರಕ್ಷಣೆ ನೀಡಲಿ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT