ADVERTISEMENT

ಮಾಯಾವತಿ ರಾಜೀನಾಮೆ ಅಂಗೀಕರಿಸಿದ ಅನ್ಸಾರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಮಾಯಾವತಿ ರಾಜೀನಾಮೆ ಅಂಗೀಕರಿಸಿದ ಅನ್ಸಾರಿ
ಮಾಯಾವತಿ ರಾಜೀನಾಮೆ ಅಂಗೀಕರಿಸಿದ ಅನ್ಸಾರಿ   

ನವದೆಹಲಿ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯಸಭೆ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಅಂಗೀಕರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಬಿಜೆಪಿ ಮತ್ತು ಸಭಾಪತಿ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಮಾಯಾವತಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದರು. ಆದರೆ ಮೂರು ಪುಟಗಳಷ್ಟಿದ್ದ ಈ ರಾಜೀನಾಮೆ ಪತ್ರ ನಿಗದಿತ ನಮೂನೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನು ತಿರಸ್ಕರಿಸಲಾಗಿತ್ತು. ನಿಗದಿತ ನಮೂನೆಯಲ್ಲಿ ಅವರು ರಾಜೀನಾಮೆ ನೀಡಿದ ನಂತರ ಅದನ್ನು ಅಂಗೀಕರಿಸಲಾಯಿತು.

ರಾಜೀನಾಮೆಯಲ್ಲಿ ಕಾರಣಗಳನ್ನು ವಿವರಿಸಬಾರದು ಎಂಬುದು ನಿಯಮ. ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜತೆ ಮಾಯಾವತಿ ಮಾತುಕತೆ ನಡೆಸಿದರು. ನಂತರ ಅವರ ಸೂಚನೆಯಂತೆ ಒಂದು ಸಾಲಿನ ಕೈಬರಹದ ರಾಜೀನಾಮೆಯನ್ನು ಸಲ್ಲಿಸಿದರು ಎಂದು ರಾಜ್ಯಸಭೆ ಕಾರ್ಯಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.