ADVERTISEMENT

ಮಿಗ್ -21 ಪತನ: ಪೈಲಟ್ ಪಾರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 17:20 IST
Last Updated 4 ಫೆಬ್ರುವರಿ 2011, 17:20 IST

ಗ್ವಾಲಿಯರ್ (ಪಿಟಿಐ): ಭಾರತೀಯ ವಾಯುಪಡೆಯ ಮಿಗ್- 21 ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಮಧ್ಯಪ್ರದೇಶದಲ್ಲಿ ಶುಕ್ರವಾರ ನೆಲಕ್ಕಪ್ಪಳಿಸಿದ್ದು, ಪೈಲಟ್ ಪಾರಾಗಿದ್ದಾರೆ.

ಗ್ವಾಲಿಯರ್ ವಾಯುನೆಲೆಯಿಂದ ಬೆಳಿಗ್ಗೆ 11:25ಕ್ಕೆ ಹೊರಟ ವಿಮಾನ, ಬೆಲಾ ಬಿಮ್‌ಲಟ್ ಗ್ರಾಮದಬಳಿ ಬಂದಾಗ ಕಾಣಿಸಿಕೊಂಡ ಎಂಜಿನ್ ಸಮಸ್ಯೆಯಿಂದಾಗಿ ಅಪಘಾಕ್ಕೀಡಾಯಿತು. ವಿಮಾನ ಜನ ವಸತಿ ಇಲ್ಲದ ಅರಣ್ಯ ಪ್ರದೇಶದಲ್ಲಿ ಬಿದ್ದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ.

ಪರಿಸ್ಥಿತಿಯ ಅಪಾಯವನ್ನು ಅರಿತ ಪೈಲಟ್ ಫಲ್ಗುಣಿ ಲೇಹ್ ರಾಯ್ ಅವರು ಹೊರಕ್ಕೆ ಜಿಗಿದು ಪಾರಾಗಿದ್ದಾರೆ. ಅವರನ್ನು ಕರೆತರಲು ವಾಯುಪಡೆ ಹೆಲಿಕಾಪ್ಟರ್ ಕಳುಹಿಸಲಾಗಿದೆ. ದುರಂತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಎಎಫ್ ವಕ್ತಾರ  ತಿಳಿಸಿದ್ದಾರೆ. ಈ ವರ್ಷದ ಮೊದಲ ಮಿಗ್ ಶ್ರೇಣಿಯ ವಿಮಾನ ದುರಂತ ಇದಾದೆ.  ಕಳೆದ ವರ್ಷ 4 ಮಿಗ್-27 ಹಾಗೂ 2 ಮಿಗ್-21 ಅಪಘಾತಕ್ಕೀಡಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.