ADVERTISEMENT

ಮುಂದಿನ ಏಪ್ರಿ‌ಲ್‌ನಿಂದ ಬಿಹಾರದಲ್ಲಿ ಸಾರಾಯಿ ನಿಷೇಧ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 10:54 IST
Last Updated 26 ನವೆಂಬರ್ 2015, 10:54 IST

ಪಟ್ನಾ (ಐಎಎನ್‌ಎಸ್‌): 2016ರ ಏಪ್ರಿಲ್ 1ರಿಂದ ಬಿಹಾರದಲ್ಲಿ ಮದ್ಯ ನಿಷೇಧ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಘೋಷಿಸಿದ್ದಾರೆ.

ಮದ್ಯಪಾನ ನಿಷೇಧ ದಿನಾಚಾರಣೆಯ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರು ಈ ನಿರ್ಧಾರ ಪ್ರಕಟಿಸಿದರು.

‘ಮದ್ಯ ಕುಡಿತದ ಹೆಚ್ಚಳದಿಂದ ಎಲ್ಲರಿಗಿಂತ ಹೆಚ್ಚಾಗಿ ಮಹಿಳೆಯರು ಕಷ್ಟ ಅನುಭವಿಸುತ್ತಿದ್ದರು’ ಎಂದು ಅಭಿಪ್ರಾಯ ಪಟ್ಟರು.

ADVERTISEMENT

ಉನ್ನತ ಮಟ್ಟದ ಸಭೆ: ಮದ್ಯ ನಿಷೇಧಕ್ಕೂ ಮುನ್ನ ನಿತೀಶ್ ಕುಮಾರ್ ಅವರು ಈ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧಿಸುವುದಾಗಿ ನಿತೀಶ್ ಕುಮಾರ್ ಅವರು ಕಳೆದ ಜುಲೈ ತಿಂಗಳಿನಲ್ಲಿಯೇ ಪ್ರಕಟಿಸಿದ್ದರು.

ಇದೇ ವಾರದ ಆರಂಭದಲ್ಲಿ ಮದ್ಯ ನಿಷೇಧ ಕುರಿತು ಅಬಕಾರಿ ಸಚಿವ ಅಬ್ದುಲ್ ಜಲೀಲ್‌ ಮಸ್ತಾನ್ ಅವರೂ ಮಾತನಾಡಿದ್ದರು.

ಬುಧವಾರವಷ್ಟೇ ಮದ್ಯ ನಿಷೇಧವನ್ನು ಬೆಂಬಲಿಸುವುದಾಗಿ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಅವರು ತಿಳಿಸಿದ್ದರು.

ಆದಾಯ ಕೊರತೆ?: ಸರ್ಕಾರದ ಈ ಕ್ರಮದಿಂದ ಬೊಕ್ಕಸಕ್ಕೆ ಬರುವ ಆದಾಯದ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.