ADVERTISEMENT

ಮುಂಬೈನಲ್ಲಿ ಬಸ್‌ ಮುಷ್ಕರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2014, 19:30 IST
Last Updated 1 ಏಪ್ರಿಲ್ 2014, 19:30 IST

ಮುಂಬೈ(ಪಿಟಿಐ): ವಾಣಿಜ್ಯ ನಗರಿ ಯಲ್ಲಿ ಪ್ರಮುಖ ಸಾರ್ವಜನಿಕ ಸಾರಿಗೆಯಾಗಿ ಗುರುತಿಸಿಕೊಂಡಿರುವ ‘ಬೆಸ್ಟ್‌’ ಬಸ್‌ಗಳು ಮಂಗಳವಾರ ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವಂತಾಯಿತು.

ಮುಂಬೈನಾದ್ಯಂತ ಸಂಚರಿಸುವ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಕಂಪ್ಯೂಟರ್‌ ಚಾಲಿತ  ಹೊಸ  ಸಂಚಾರ ವೇಳಾಪಟ್ಟಿ ಜಾರಿ ವಿರೋಧಿಸಿ  ದಿಢೀರ್‌ ಮುಷ್ಕರ ನಡೆಸಿದ್ದ­ರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಳಿಗ್ಗೆಯಿಂದಲೇ ಬಸ್‌ ಸಂಚಾರ ನಡೆಸದ ಕಾರಣ ಕಚೇರಿಗೆ ತೆರಳುವವರು ಮತ್ತು ಪರೀಕ್ಷೆಗಾಗಿ ಶಾಲಾ ಕಾಲೇ­ಜು­­­ಗಳಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನು­ಭವಿಸಿದರು.

ಶೇ 40 ರಷ್ಟು ಸಿಬ್ಬಂದಿ ಹೊಸ ಸಂಚಾರ ಪದ್ಧತಿಯನ್ನು ಒಪ್ಪಿ­ಕೊಂಡಿ ದ್ದಾರೆ ಎನ್ನಲಾಗುತ್ತಿದೆ. ಆದರೂ ಶೇ 20 ರಷ್ಟು ಸಿಬ್ಬಂದಿ 12 ರಿಂದ 13 ಗಂಟೆ ಬಸ್‌ ಸಂಚಾರ ವಿರೋಧಿಸಿ ದಿಢೀರ್‌ ಮುಷ್ಕರ ಆರಂಭಿಸಿದರು. ಈ ಹಿಂದಿ­ನಂತೆ ಕೈ ಚಾಲಿತ ವೇಳಾಪಟ್ಟಿ ಮುಂದುವರಿಸುವಂತೆ ಆಗ್ರಹಿಸಿದರು.

‘ಹೊಸ ಸಂಚಾರ ವೇಳಾಪಟ್ಟಿ ಅಳವಡಿಸಿಕೊಳ್ಳುವುದರಿಂದ ಸಿಬ್ಬಂದಿ ಕಾರ್ಯದಕ್ಷತೆಯನ್ನು ಸರಿಯಾಗಿ ಬಳಸಿಕೊಳ್ಳ­ಬಹುದು. ಅಲ್ಲದೆ ಸಂಸ್ಥೆ ಗಳಿಗೆ ವಾರ್ಷಿಕ 32 ಕೋಟಿ ಉಳಿತಾ ಯವಾಲಿದೆ’ ಎಂದು ಬೆಸ್ಟ್‌ ಪ್ರಧಾನ ವ್ಯವಸ್ಥಾಪಕ ಓಂ ಪ್ರಕಾಶ್‌ ಗುಪ್ತಾ ಹೇಳಿದ್ದಾರೆ.

ಮುಂಬೈ ನಗರ, ಥಾಣೆ ಮತ್ತು ಮೀರಾ ರೋಡ್‌ನಲ್ಲಿ  4200 ಬೆಸ್ಟ್‌ ಬಸ್‌ಗಳು ಪ್ರತಿದಿನ ಸಂಚಾರ ನಡೆಸುತ್ತಿದ್ದು, 40 ಲಕ್ಷ ಪ್ರಯಾಣಿಕರು ಇವುಗಳಲ್ಲಿ ಪ್ರಯಾಣಿಸುತ್ತಾರೆ. ಸುಮಾರು 22,000 ಚಾಲಕ, ನಿರ್ವಾಹಕರು 500 ಕ್ಕೂ ಹೆಚ್ಚು  ಮಾರ್ಗಗಳಲ್ಲಿ ಬಸ್‌ ಓಡಿಸುತ್ತಾರೆ.

ಮುಷ್ಕರ ಸ್ಥಗಿತಗೊಳಿಸಿ ತಕ್ಷಣ ಕೆಲಸಕ್ಕೆ ಹಾಜರಾಗುವಂತೆ ಬಾಂಬೆ ಹೈಕೋರ್ಟ್‌ ಈ ನಡುವೆ ಆದೇಶಿಸಿದೆ.

ಬೆಸ್ಟ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿ­ರುವ ನ್ಯಾಯ­ಮೂರ್ತಿ ಎನ್‌.ಎಂ. ಜಾಮದಾರ್‌, ಮುಷ್ಕರ ನಿಲ್ಲಿಸುವಂತೆ ಸಾರಿಗೆ ಯೂನಿಯನ್‌ಗೆ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.