ADVERTISEMENT

ಮುಂಬೈ ಅಗ್ನಿ ಅವಘಡ: ಐವರು ಬಿಎಂಸಿ ಅಧಿಕಾರಿಗಳ ಅಮಾನತು

ಏಜೆನ್ಸೀಸ್
Published 29 ಡಿಸೆಂಬರ್ 2017, 10:20 IST
Last Updated 29 ಡಿಸೆಂಬರ್ 2017, 10:20 IST
ಮುಂಬೈ ಅಗ್ನಿ ಅವಘಡ: ಐವರು ಬಿಎಂಸಿ ಅಧಿಕಾರಿಗಳ ಅಮಾನತು
ಮುಂಬೈ ಅಗ್ನಿ ಅವಘಡ: ಐವರು ಬಿಎಂಸಿ ಅಧಿಕಾರಿಗಳ ಅಮಾನತು   

ಮುಂಬೈ: ಮುಂಬೈನ ಕಮಲಾ ಮಿಲ್ಸ್‌ ಕಾಂಪೌಂಡ್‌ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿ ಬ್ರಹನ್ಮುಂಬೈ ಪುರಸಭೆ ನಿಗಮದ (ಬಿಎಂಸಿ) ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ವಾರ್ಡ್‌ನ ಸಹಾಯಕ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದುರಂತದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ದುರಂತಕ್ಕೀಡಾದ ಕಟ್ಟಡದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕಟ್ಟಡದಲ್ಲಿದ್ದ ಬೆಂಕಿ ನಂದಿಸುವ ಪರಿಕರಗಳು ಸುಸ್ಥಿತಿಯಲ್ಲಿರಲಿಲ್ಲ. ಬಿಕ್ಕಟ್ಟು ನಿರ್ವಹಿಸುವ ವಿಷಯದಲ್ಲಿ ಅಲ್ಲಿನ ಸಿಬ್ಬಂದಿಗೆ ಸಮರ್ಪಕ ತರಬೇತಿ ಇರಲಿಲ್ಲ ಎನ್ನಲಾಗಿದೆ.

ADVERTISEMENT

ಕಟ್ಟಡದ ಮಾಲೀಕರು ಮತ್ತು ಮ್ಯಾನೇಜರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಮಹಿಳೆಯೊಬ್ಬರೂ ಸೇರಿದ್ದಾರೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.